ರೋಹಿಣಿ ಅವರ ವಿಷಯದಲ್ಲಿ ಮೌನ ಮುರಿದ ರಮ್ಮಾ.

0

ಬೆಂಗಳೂರು-ಬಹುದಿನಗಳ ಬಳಿಕ ಮೋಹಕ ತಾರೆ ರಮ್ಯ ಅವರು,  ತಮ್ಮ ಮೌನ ಮುರಿದಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹಂಚಿಕೊಂಡಿದ್ದು, ರೋಹಿಣಿ ಸಿಂಧೂರಿ, ಅವರ ಕಾರ್ಯವೈಖರಿಯನ್ನು ನಾನೂ ನೋಡಿರುವೆ. ಅವರ ಕೆಲಸವನ್ನು ನಾ ಮೆಚ್ಚಿಕೊಂಡಿರುವೆ, ಈಗಲೂ ಮುಚ್ಚಿಕೊಳ್ಳುವೆ,  ಆದರೆ ಇಂದಿನ ರಾಜಕೀಯ, ಉತ್ತಮ ಕೆಲಸಗಳನ್ನು ಮಾಡುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಮತ್ತು ಬೆಂಬಲಿಸುತ್ತಿಲ್ಲ ಎನ್ನುವ ನಿರಾಶೆ ಇದೆ’ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ  ಖಾಸಗಿ ಸುದ್ದಿ ಮಾಧ್ಯಮಕ್ಕೆ ರೋಹಿಣಿ ಸಿಂಧೂರಿ ಅವರು ನೀಡಿದ ಸಂದರ್ಶನದ ತುಣುಕು ಅಪ್‌ಲೋಡ್‌ ಮಾಡಿದ್ದಾರೆ. ಇದರಲ್ಲಿ ವರ್ಗಾವಣೆ ನಿರೀಕ್ಷೆ ಮಾಡಿದ್ರಾ ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿರುವ ರೋಹಿಣಿ ಸಿಂಧೂರಿ, ‘ಇಲ್ಲ, ನಿರೀಕ್ಷೆ ಮಾಡಿರಲಿಲ್ಲ ಎನ್ನುವ ವಿಡಿಯೋ ಇದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply