ಬೆಂಗಳೂರು- ಈ ಸಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಿದೆ. ಹೀಗಾಗಿ ಟಿಕೇಟ್ ಆಕಾಂಕ್ಷಿಗಳು ಹೋದ ಬಂದಲ್ಲಿ ಟಿಕೇಟ್ ನಮಗೆ ಕೊಡಿ ನಮಗೆ ಕೊಡಿ ಎಂದು ಕೇಳಬೇಡಿ , ಮೊದಲು ಪಕ್ಷವನ್ನು ಕಟ್ಟುವ ಕೆಲಸ ಮಾಡೋಣ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಬೆಂಗಳಮಾತನಾಡೊದ ಅವರು ನಾವೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕಾಗಿ ನಾವು ದುಡಿಯಬೇಕು , ಟಿಕೇಟ್ ಆಕಾಂಕ್ಷೆ ಇರುವು ಸರ್ವೇ ಸಾಮಾನ್ಯ ಆದ್ರೆ ಮೊದಲು ನಾವು ಪಕ್ಷವನ್ನು ಗಟ್ಟಿಗೊಳಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪುಗಳನ್ನು ಜನರ ಮುಂದೆ ತರಬೇಕು ಎಂದಿದ್ದಾರೆ. ಇನ್ನು ಕೇಂದ್ರ ಸರ್ಕಾರ ರೈತರು ನಡೆಸುವ ಹೋರಾಟವನ್ನು ಹತ್ತಿಕ್ಕುವ ಕಲೆಸ ಮಾಡುತ್ತಿದ್ದೆ. ಮೊನ್ನೆ ನಡೆದ ಘಟನೆಯಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ. ಯಾರೋ ಒಬ್ನ ಹೋಗಿ ಕೊಂಪು ಕೋಟಿಯ ಮೇಲೆ ಭಾರತದ ಧ್ವಜ ತೆಗೆದು ಬೇರೆ ಧ್ವಜವನ್ನು ಹಾರಿಸುತ್ತಾನೆ ಎಂದರೆ ಹೇಗೆ , ಯಾಕೆ ಈ ವಿಷಯ ಗುಪ್ತಚರ ಇಲಾಖೆಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ….