ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ,

ಹಿರಿದಪ್ಪ ರಾಜನಿತ್ತಡೆ ಒಲ್ಲೆ,

ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗಿತ್ತಡೆ

ನಿಮ್ಮ ನಿತ್ತೆ ಕಾಣಾ ರಾಮನಾಥ.

 

ದೇವರ ದಾಸಿಮಯ್ಯನವರು ತಮ್ಮ ವಚನವೊಂದರಲ್ಲಿ ಮಹಾತ್ಮರ ವಾಣಿಗೆ ಪ್ರಾಮುಖ್ಯತೆ ಕೊಟ್ಟಿರುವುದನ್ನು ಕಾಣುತ್ತೇವೆ. ಆ ವಾಣಿಯ ಮಹತ್ವ ಅಪಾರವಾದದ್ದು. ಅದರ ಮುಂದೆ ರಜ್ಯ ಆನೆ, ಕುದುರೆ, ಸಿರಿತನ ಮೊದಲಾದವುಗಳು ಗಾಳಿಗೊಡ್ಡಿದ ದೀಪದಂತೆ. ಅವುಗಳಿಂದ ಈಶ್ವರನ ದರ್ಶನ ಅಸಾಧ್ಯ. ಮಹಾತ್ಮರ ವಾಣಿಯಲ್ಲಿ ಅದ್ಭುತ ಶಕ್ತಿಯಿದೆ. ಆ ಶಕ್ತಿ (ವಾಣಿ) ದೇವವಾಣಿಯಾಗಿದೆ.

ಒಮ್ಮೆ ಬುದ್ಧ ಭಗವಂತನು ಹಳ್ಳಿವೊಂದರಲ್ಲಿ ಕೆಲವು ದಿನಗಳ ಮಟ್ಟಿಗೆ ವಾಸ್ತವ್ಯ ಹೂಡಿದರು. ಅಲ್ಲಗೆ ಸವಿರಾರು ಜನರು ಬುದ್ಧನ ದರ್ಶನ, ಸಂದೇಶ ಕೇಳಲು ಬರತೊಡಗಿದರು. ಆದರೆ ಅದೆ ಹಳ್ಳಿಯ ಯುವಕನೊಬ್ಬ ಬುದ್ಧನ ದರ್ಶನಕ್ಕೆ ಹೊಗಿರಲಿಲ್ಲ. ಅವನನ್ನು ಕುರಿತು ಅವನ ತಂದೆಯು ಬುದ್ಧನ ದರ್ಶನ ಹಾಗೂ ಸಂದೇಶ ಕೇಳಲು ಈ ಊರಿನ ಜನರಷ್ಟೇ ಅಲ್ಲ. ಸುತ್ತ ಮುತ್ತಲಿನ ಹಳ್ಳಿಯ ಜನರು ಬರುತ್ತಿದ್ದಾರೆ, ನೀನ್ಯಾಕೆ ಹೋಗುತ್ತಿಲ್ಲ ? ಮಗನ ತಿರಸ್ಕಾರ ಕಂಡು ತಂದೆ ಮಗನಿಗೆ ನೂರು ಸುವರ್ಣ ನಾಣ್ಯ ಕೊಡುತ್ತೇನೆಂದು ಆಮಿಷ ಒಡ್ಡುವನು. ಆU ಮಗನು ಬುದ್ಧನ ದರ್ಶನ ಹಾಗೂ ಸಂದೇಶ ಕೇಳಿಬಂದು ನೂರು ಸುವರ್ಣ ನಾಣ್ಯ ಪಡೆದುಕೊಂಡನು. ಮರುದಿವಸವು ಸಹ ತಂದೆ ಮಗನಿಗೆ ಬುದ್ಧನ ಸಂದೇಶ ಕೇಳಿ ಯಥಾವತ್ತಾಗಿ ನನಗೆ ಹೇಳಿದರೆ  ಸಾವಿರ ಸುವರ್ಣ ನಾಣ್ಯ ಕೊಡುತ್ತೇನೆ ಎಂಬ ತಂದೆಯ ಮಾತಿಗೆ ಒಪ್ಪಿಕೊಂಡು ಬುದ್ಧನ ದಿವ್ಯವಾಣಿ ಕೇಳಲು ಹೋದವನು ಹಿಂದಿರುಗಿ ಬರಲಿಲ್ಲ. ಪ್ರವಚನ ಮುಗಿಸಿ ಬುದ್ಧನು ತನ್ನ ಕುಟಿರಕ್ಕೆ ಹೋಗಿದ್ದಾನೆ. ಆನರು ತಮ್ಮ ತಮ್ಮ ಮನೆ ಸೇರಿದ್ದಾರೆ. ಆದರೆ ಆ ಯುವಕ ಮಾತ್ರ ಹಾಗೆ ಕುಳಿತಿದ್ದಾನೆ. ಇತ್ತ ಮಗನ ಆಗಮನಕ್ಕಾಗಿ ತಂದೆ ಸಾವಿರ ವರಹಗಳೊಂದಿಗೆ ಕಾಯುತ್ತಿದ್ದಾನೆ. ಮಗ ಬರಲಾರದ್ದನ್ನು ಸಹಿಸದೆ ತಂದೆ ತಾನೇ ಪ್ರವಚನ ನಡೆದ ಸ್ಥಳಕ್ಕೆ ಬಂದು ನೋಡುತ್ತಾನೆ. ಬರೀ ಬಯಲು, ಯಾರಿಲ್ಲ. ಮಗನು ಧ್ಯಾನ ಮಗ್ನನಾಗಿದ್ದಾನೆ. ತಂದೆ ಮಗನ ಹತ್ತಿರ ಹೋಗಿ ಎಚ್ಚರಿಸುವನು. ಆಗ ಮಗನು ತಂದೆಗೆ ಯಾರು ನೀವು ? ನನ್ನನ್ನೇಕೆ ಎಚ್ಚರಿಸಿದ್ದಿರಿ ? ಎಂದಾಗ ತಂದೆಗೆ ಆಶ್ಚರ್ಯ ಒಂದು ಕಡೆಯಾದರೆ, ಸಂತೋಷ ಇನ್ನೊಂದು ಕಡೆಯಾಗಿತ್ತು. ತಂದೆ ತಾನು ಅಂದು ಕಂಡಂತೆ ತನ್ನ ಮಗ ಜ್ಞಾನಿಯಾಗಬೇಕೆಂಬ ಆಸೆ ಫಲಿಸಿತು. ಇನ್ನೂ ಪರೀಕ್ಷಿಸಬೇಕೆಂದು ನಾನು ನಿನ್ನ ತಂದೆ, ನಿನಗಾಗಿ ಸಾವಿರ ಬಂಗಾರದ ವರಹಗಳು ಕಾಯುತ್ತಿವೆ ಬೇಗ ಮನೆಗೆ ಹೋಗೋಣ ಎಂದಾಗ, ನೀವು ನಿನ್ನೆ ಕೊಟ್ಟಿರುವ ನೂರು ರೂಪಾಯಿಗಳು ಇಲ್ಲಿಯೇ ಇವೆ ತಗೊಳ್ಳಿ ಎಂದು ಜೇಬಿನಿಂದ ತಗೆದು ನಿಮ್ಮ ದುಡ್ಡು ನನಗೆ ಬೇಡ. ತಗೆದುಕೊಂಡು ಹೋಗಿ ಎಂದನು.

ದೇವರ ದಾಸಿಮಯ್ಯನವರ ವಾಣಿಯಂತೆ ಬುದ್ಧ ಮಹಾತ್ಮನ ಸೂಳ್ನುಡಿಯ ಪ್ರಭಾವದಿಂದ ಆ ಯುವಕ ಆಸೆಯಲ್ಲಾ ತೊರೆದು ಜಗತ್ತನ್ನು ಮರೆತು, ಬುದ್ಧನ ದಿವ್ಯವಾಣಿಯಂತೆ ದೈವ ಸಾಕ್ಷಾತ್ಕಾರದ ಮಾರ್ಗ ಕಂಡುಕೊಂಡು “ಹೂವಿನ ಜೊತೆಗೆ ನಾರು ಸ್ವರ್ಗಕ್ಕೆ ಹೋದಂತೆ” ಮುಂದೆ ಅವನು ಬುದ್ಧನ ಶಿಷ್ಯನಾಗಿ, ಬಿಕ್ಷುನಾಗಿ ಮೋಕ್ಷ ಪಡೆದನು.

About Author

Priya Bot

Leave A Reply