ದೆಹಲಿ- ಕರೋನಾ ಮಾಹಾ ಮಾರಿಯ ಹಾಟ್ ಸ್ಪಾಟ್ ಆಗಿದ್ದ ರಾಷ್ಟ್ರದ ರಾಜಧಾನಿ ದೆಹಲಿ ಈಗ ಮತ್ತೊಂದು ದಾಖಲೆ ಬರೆದಿದೆ. ಕಳದೆ ಏಳೂ ತಿಂಗಳಲ್ಲಿ ಅತೀ ಕಡಿಮೆ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ದೆಹಲಿಯಲ್ಲಿ ಭಾನುವಾರ ಕೇವಲ 424ಪ್ರಕರಣಗಳು ದಾಖಲಾಗಿದ್ದು, ಏಳು ತಿಂಗಳಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ದಾಖಲಾದ ಸಂಖ್ಯೆ ಇದಾಗಿದೆ. ಇನ್ನು ಭಾನುವಾರ 14 ರೋಗಗಳು ಕೋವಿಡ್ ನಿಂದಾಗಿ ಸಾವನಪ್ಪಿದ್ದಾರೆ. ಇದೊಂದು , ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಸಾವಿನ ಪ್ರಮಾಣವು ಶೇಕಡಾ 0.62 ಕ್ಕೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಳಿಯಲ್ಲಿ ಈವರೆಗೂ 6.26 ಲಕ್ಷಕ್ಕೂ ಅಧಿಕ ಕೋನಾ ಪ್ರಕರಣಗಳು ಪತ್ತೆಯಾಗಿವೆ. ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 10,585 ಕ್ಕೆ ಏರಿದೆ ಎಂದು ಅವರು ಹೇಳಿದರು….

suddinow.com
suddinow.com