ಹಾಸನ – ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಲೇ ಇದೆ. ಇದರಿಂದ ಜನಿರಿಗೆ ಭಯದ ವಾತಾವರಣ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.  ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದಲ್ಲಿ ಇಂದು ಕಾಡಾನೆ ದಾಳಿ‌ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿ ಒಬ್ಬ ಸಾವಿಗೀಡಾಗಿದ್ದಾನೆ.‌ ಮೃತ ವ್ಯಕ್ತಿಯನ್ನು

ಕೇರಳ ಮೂಲದ  ರಾಜನ್(45) ಎಂದಯ ಗುರುತಿಸಲಾಗಿದೆ.  ಪಿ.ಎಫ್.ಸಾಲ್ಡಾನ ಅವರ ತೋಟದಲ್ಲಿ ಮೆಣಸು ಕಾಯುವ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ  ಕಾಡಾನೆಯೊಂದು ಆತನ ಮೇಲೆ ದಾಳಿ ನಡೆಸಿದೆ. ದಾಳಿ ನಡೆಸಿದ ಕಾರಣಕ್ಕೆ ರಾಜನ್ ಸ್ಥಳದಲ್ಲಿ ಮೃತ ಪಟ್ಟಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬೇಟಿ ನೀಡಿ ಸ್ಥಳದ ಪರಿಶೀಲನೆಯನ್ನು ನಡೆಸಿದ್ದಾರೆ. ಇದರ ಅನ್ವಯ  ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ …

Leave A Reply