ಜಿಂದಾಲ್ ಗೆ ಭೂಮಿ ನೀಡುವಂತೆ ಹೆಚ್ಚಿದ ಒತ್ತಡ

0

ಬಳ್ಳಾರಿ – ಇಷ್ಟು ದಿನ ಶಾಂತವಾಗಿದ್ದ ಜಿಂದಾಲ್ ಭೂಮಿ ಪರಭಾರೆ ವಿಚಾರ ಈಗ ಮತ್ತೆ ತಾರಕಕ್ಕೆ ಏರಿದೆ. ಕಳೆದ ಎರಡು ದಿನಗಳ ಹಿಂದೆ, ಕಾಂಗ್ರಸ್ ನ ಹಿರಿಯಾ ಮುಖಂಡರಾದ ಕೆಸಿ ಕೊಂಡಯ್ಯಾ ಅವರು ಜಿಂದಾಲ್ ಪರ ಬ್ಯಾಟಿ ಬೀಸಿದ್ದರು. ಈಗ ಸಂಡೂರು ಶಾಸಕ ತುಕಾರಾಂ ಅವರು ಜಿಂದಾಲ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಜಿಂದಾಲ್‌ಗೆ ಭೂಮಿ ಪರಬಾರೆ ವಿಚಾರ ರಾಜಕೀಯ ತಿರುವನ್ನ ಪಡೆದುಕೊಳ್ಳುತ್ತಿದೆ. ದಿನೇ ದಿನೇ ಕೈ ಶಾಸಕರು ಜಿಂದಾಲ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂಮಿ ಪರಬಾರೆ ವಿಚಾರವಾಗಿ ಕಾನೂನಿನ ವಿರುದ್ಧ ನಡೆದುಕೊಳ್ಳುತ್ತಿದೆ. ಜಿಂದಾಲ್ ನಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ ಮತ್ತು ಕೋಟ್ಯಾಂತರ ರುಪಾಯಿ ಹಣವನ್ನ ಟ್ಯಾಕ್ಸ್ ರೂಪದಲ್ಲಿ ಸರ್ಕಾರಕ್ಕೆ ನೀಡುತ್ತದೆ. ಇಷ್ಟಾದರೂ ಕೂಡ ಸರ್ಕಾರ ಮಾತ್ರ ಇವರಿಗೆ ಭೂಮಿ ಕೊಡುತ್ತಿಲ್ಲ ಎಂದು ಸಂಡೂರ ಶಾಸಕ ತುಕಾರಾಂ ಜಿಂದಾಲ್ ಪರ ಬ್ಯಾಟ್ ಬೀಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ರಾಜ್ಯ ಸರ್ಕಾರ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು, ಅದರ ವಿರುದ್ಧ ನಡೆದುಕೊಳ್ಳ ಬಾರದು. ನಾನು ಈಗಾಗಲೇ ಭೂಮಿ ಪರಬಾರೆ ಕುರಿತಂತೆ ಸಮಗ್ರ ಮಾಹಿತಿ ಕಲೆ ಮಾಡಿಕೊಳ್ಳುತ್ತಿದ್ದೆನೆ. ಸಿದ್ದರಾಮಯ್ಯನವರು ಆಸ್ಪತ್ರೆ ಬಂದ ಬಳಿಕ ಅವರೊಂದಿಗೆ ಈ ವಿಷಯ ಚರ್ಚೆ ಮಾಡುತ್ತೆನೆ. ಸಮ್ಮಿಶ್ರ ಸರ್ಕಾರ ಇದ್ದಾಗ ಈ ವಿಷಯ ಚರ್ಚೆಗೆ ಬಂದಿತ್ತು.

ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಇದಕ್ಕೊಂದ ಸಮಿತಿ ರಚನೆ ಮಾಡಿದ್ರು. ಸಮಿತಿ ವರದಿ ಸಲ್ಲಿಸುವ ಮುನ್ನವೇ ಸರ್ಕಾರ ಬಿದ್ದು ಹೋಯಿತು‌ ಹೀಗಾಗಿ ಇದು ಪೂರ್ಣ ವಾಗಲಿಲ್ಲ. ಈ ವಿಚಾರವನ್ನ ನಾನು ಸದನದಲ್ಲಿ ಚರ್ಚೆ ಮಾಡಲಿದ್ದೆನೆ. ಇದರಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಅಭಿವೃದ್ಧಿ ಪರವಾಗಿ ಕೆಲಸ ಮಾಡಬೇಕು. ಆನಂದ್ ಸಿಂಗ್ ಅವರು ಕೂಡ ಮೈನಿಂಗ್ ಮಾಡಿದ್ದಾರೆ ಅವರು ಕೂಡ ಅರ್ಥ ಮಾಡಿಕೊಳ್ಳಬೇಕು ಎಂದು ಸಿಂಗ್ ಗೆ ಟಾಂಗ್ ಕೊಟ್ಟಿದ್ದಾರೆ. ‌‌

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply