ನವದೆಹಲಿ- ಕೇಂದ್ರ ಸರ್ಕಾದ 2021 -22 ರ ಬಜೆಟ್ ಮಂಡನೆ ಯಾಗುತ್ತಿದ್ದು ಈಗಾಗಲೇ ದೇಶದಲ್ಲಿ ಎರಡು ಲಸಿಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಎರಡು ಲಸಿಕೆಗಳು ಬರಲಿವೆ ಎಂದ ವಿತ್ತ ಸಚಿವೆ‌ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.  ಈಗಾಗಲೇ ದೇಶದಲ್ಲಿ ಲಸಿಕೆ ನೀಡುವ ಕಾರ್ಯಾ ಆರಂಭವಾಗಿದ್ದು,  ಕೋವಿಡ್ ಲಸಿಗೆಗಾಗಿ ಸರ್ಕಾರ 35 ಸಾವಿರ ಕೋಟಿ ಮೀಸಲಿರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಎಂದು ತಿಳಿಸಿದ್ದಾರೆ.

ಈ ವರ್ಷದ ಬಜೆಟ್  2021-22 ನಲ್ಲಿ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ರೂ ಮೀಸಲಿಡಲಾಗಿದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ಅನುದಾನವನ್ನು   ಮೀಸಲಿರಿಸಲಾಗುವುದು. ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ, ಈ ವರ್ಷದ ಹೆಲ್ತ್ ಬಜೆಟ್ ಗೆ 2 ಲಕ್ಷ 32 ಸಾವಿರ ಕೋಟಿ ಅನುದಾನ  ಏರಿಕೆ ಕಂಡಿದೆ. ಈ ಮೊದಲಿನ ಬಜೆಟ್ ನಲ್ಲಿ 92 ಸಾವಿರ ಕೋಟಿ ಫಂಡ್ ನೀಡಲಾಗಿತ್ತು. ಈ ಬಾರಿ ಹೆಲ್ತ್ ಬಜೆಟ್ ಫಂಡ್ ಶೇ.137ರಷ್ಟು ಏರಿಕೆಯಾಗಿದೆ ಎಂದು ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.

ಇದೇ ವೇಳೆ ಭಾರತದಲ್ಲಿ ಎರಡು ಕೊರೊನಾ ವ್ಯಾಕ್ಸಿನ್ ಹಂಚಿಕೆ‌ಮಾಡುತ್ತಿದ್ದು.‌ ಕೇವಲ ದೇಶದಲ್ಲಿ ಮಾತ್ರವಲ್ಲಾ ನೂರಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಹಂಚಿಕೆ‌ಮಾಡಲಾಗಿದೆ , ಇದರ ಲಾಭವನ್ನ  ಬೇರೆ ದೇಶಗಳು ಪಡೆಯುತ್ತಿವೆ. ಎರಡು ವಿಶ್ವ ಯುದ್ಧದ ರೀತಿಯಲ್ಲಿ ಕೋವಿಡ್  ಸಹ ಒಂದು ರೀತಿಯಲ್ಲಿ ಯುದ್ದದ ಸಂದರ್ಭ ಎದುರಾಗಿದೆ. ಕೋವಿಡ್ ಬಳಿಕ  ನಂತರದ ಜಗತ್ತು ಮತ್ತು ರಾಜಕೀಯ ನೀತಿಗಳು ಬದಲಾಗುತ್ತಿವೆ. ಈ ಯುದ್ಧದಲ್ಲಿ ಭಾರತವನ್ನ  ಈಡಿ ವಿಶ್ವ ಲ್ಯಾಂಡ್ ಆಫ್ ಹೋಪ್ ರೀತಿಯಲ್ಲಿ ಜಗತ್ತು ನೋಡುತ್ತಿದೆ.

About Author

Priya Bot

Leave A Reply