ಕರೋನಾ ಮಾಹಾ ಮಾರಿಯ ಹೊಡೆತಕ್ಕೆ ಸಿಲುಕಿರುವ ಅನೇಕ ರಾಷ್ಟ್ರಗಳು ಆರ್ಥಿಕ ಹೊಡೆತಕ್ಕಿ ಸಿಲುಕಿ ನರಳುತ್ತಿವೆ. ಆದ್ರೆ ಭಾರತದ ಆರ್ಥಿಕತೆ ಚೇತರಿಕೆ ಕಂಡಿದೆ ಎಂದು ಹಣಕಾಸು ಕಾರ್ಯದರ್ಶಿ ಡಾ.ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಆರ್ಥಿಕತೆಯು ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ ಮತ್ತು ದೇಶವು ಸಕಾರಾತ್ಮಕ ಬೆಳವಣಿಗೆಯನ್ನು ಕಂಡಿದೆ ಎಂದು ತೋರಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ಕಾರಣ ಜಿ ಎಸ್ ಟಿ ಜಾರಿ ಮಾಡಿರುವುದು ಪ್ರಮುಖ ಕಾರಣವೆಂದು ಹೇಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡ್ರೆ. ಈ ವರ್ಷ ಆದಾಯ ತೆರೆಗೆ ಕಟ್ಟುವವರ ಸಂಖ್ಯೆ ಏರಿಕೆ ಕಂಡಿದೆ, ಹೀಗಾಗಿ ದೇಶದ ಆರ್ಥಕತೆ ಸ್ಥಿರವಾಗಲಿದೆ ಎಂದಿದ್ದಾರೆ. ಇನ್ನು 2020 ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,15,174 ಕೋಟಿ ರೂ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು. ಮತ್ತು ಜುಲೈ 1, 2017 ರಿಂದ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸಿದ ನಂತರದ ಗರಿಷ್ಠವಾಗಿದೆ.
ಆದಾಯ ತೆರೆಗೆಯ ವ್ಯವಸ್ಥೆಯ ದುರುಪಯೋಗವನ್ನು ಕಡಿಮೆ ಮಾಡಲು ಮತ್ತು ಜಿ ಎಸ್ ಟಿ ತಪ್ಪಿಸಿಕೊಳ್ಳುವವರ ವಿರುದ್ಧ ಕ್ರಮಕ್ಕೆ ಮುಂದಾಗಲಿದ್ದೆವೆ. ಈ ಕುರುತಿ ಸದ್ಯದಲ್ಲಿಯೇ ಕಾರ್ಯಕ್ರಮ ಒಂದುನ್ನು ಜಾರಿಮಾಡಲಿದ್ದು ಈ ಕಾ್ಯಕ್ರಮವನ್ನು ರಾಷ್ಟ್ರವ್ಯಾಪಿ ಚಾಲನೆ ನೀಡುವುದಾಗಿ ಹೇಳಿದ್ದಾರೆ…