ಮುಂಬೈ – ದೇಶದ ಮೊದಲ ಚಾಲಕ ರಹಿತ ಮೆಟ್ರೋ ಟ್ರೇನ್ ಇನ್ನುಮುಂದೆ ಓಡಾಡಲಿದೆ. ಅದು ಎಲ್ಲಿ ಓಡಾಡಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೌದು ದೇಶದ ವಾಣಿಜ್ಯ ನಗರಿ ಮುಂಬಯಿನಲ್ಲಿ ದೇಶದ ಮೊದಲ ಚಾಲಕ ರಹಿತ ಮೆಟ್ರೊ ಟ್ರೇನ್ ಓಡಾಡಲಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನಲ್ಲಿ ಮೊದಲ ಚಾಲಕ ರಹಿತ ಮೆಟ್ರೋ ರೈಲ್ನ ಉದ್ಘಾಟನೆ ಮಾಡಿದ್ದಾರೆ.  ಚಾರ್ಕೋಪ್ ಕಾರ್ಶೆಡ್ನಲ್ಲಿ ನಡೆದ ಸಮಾರಂಭದಲ್ಲಿ ಚಾಲಕ ರಹಿತ ಮೆಟ್ರೋ ಟ್ರೇನ್ ಗೆ ಸಾಂಕೇತಿಕ ಚಾಲನೆ ನೀಡಿದ್ದಾರೆ.  ಈ ವೇಳೆ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಹಾಗೂ ರಾಜ್ಯದ ಇತರ ಸಚಿವರು ಉಪಸ್ಥಿತರಿದ್ದರು. ಈ ಮೆಟ್ರೋದ ಟ್ರಯಲ್ ರನ್ನ ಫೆಬ್ರವರಿ ಇಂದ ಆರಂಭವಾಗಲಿದೆ. ಬಳಿಕ ಎಲ್ಲ ರೀತಿಯ ಪರೀಕ್ಷೆ ಬಳಿಕ ಮುಂದಿನ ಮೇ ತಿಂಗಳಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಬೆಂಗಳೂರು ಮೂಲದ ಬಿಇಎಂಎಲ್ ಮೆಟ್ರೋ ಕೋಚ್ ಈ ರೈಲುಗಳನ್ನು ನಿರ್ಮಿಸಿದ್ದು, ಇನ್ನೂ 84 ಮೆಟ್ರೋಗಳನ್ನು ನಿರ್ಮಾನವಾಗಲಿದೆ

About Author

Priya Bot

Leave A Reply