ದಿವಟೆ ಓಣಿ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಪರಿಶೀಲನೆ

0

ಹುಬ್ಬಳ್ಳಿ

ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನದಲ್ಲಿ ಇಲ್ಲಿನ ವಾರ್ಡ್‌ ನಂ.53ರ ಕಮರಿಪೇಟೆ ದಿವಟೆ ಓಣಿ, ಕುಂಬಾರ ಓಣಿ ಮುಖ್ಯರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ರಸ್ತೆಯ ಪ್ರತಿ 30 ಮೀ. ಅಂತರದಲ್ಲಿ ಪೈಪ್ ಲೈನ್ ಅಳವಡಿಸಲು ಅನುಕೂಲವಾಗುವಂತೆ ಜಾಗ ಬಿಟ್ಟು ಪೇವರ್ಸ್ ಹಾಕುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಶಾಸಕರು, ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಕಾಲನಿಯ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಕಮರಿಪೇಟೆ ಸುತ್ತಲಿನ ದಾಜೀಬಾನಪೇಟೆ, ಮಹಾವೀರ ಗಲ್ಲಿ, ಕೊಪ್ಪಿಕರ ರಸ್ತೆ, ಬ್ರಾಡ್ ವೇ ಸೇರಿದಂತೆ ಇನ್ನಿತರೆ ಪ್ರದೇಶಗಳನ್ನು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದ್ದು, ಕಮರಿಪೇಟೆ, ದಿವಟೆ ಓಣಿ, ಕುಂಬಾರ ಓಣಿ, ಟುಮಕೂರ ಓಣಿ ಪ್ರದೇಶದ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆ ಅನುದಾನದಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಭಾಗದ ಚಿತ್ರಣವೇ ಸಂಪೂರ್ಣ ಬದಲಾಗಲಿದೆ ಎಂದು ಹೇಳಿದರು.

ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಪ್ರಕಾಶ್ ಬುರಬುರೆ, ಸುರೇಶ ಸೋಳಂಕಿ, ಶ್ರೀನಾಥ್ ಪವಾರ, ಅನಿಲ್ ಜಡಿ, ಯಲ್ಲಪ್ಪ ಮೆಹರವಾಡೆ,  ಪ್ರಕಾಶ್ ನಾಂದಿ, ಕೃಷ್ಣ ಮೆಹರವಾಡೆ, ಕಿಟ್ಟು ಲದ್ವಾ,  ಮಂಜು ಟೇಲರ, ಯಲ್ಲಪ್ಪ ಬದ್ದಿ, ಸಚಿನ್ ಹಬೀಬ್, ಸಂಜಯ್ ಹನಮಸಾಗರ, ಬುಡ್ಡಾ ಚವಾಣ್, ಶ್ರೀನಿವಾಸ್ ಸೋಳಂಕಿ, ಮಹೇಂದ್ರ ಬಸವಾ, ಅಮೃತ್ ಸೋಳಂಕಿ, ಶೀನು ಹಬೀಬ್, ಹೀರಾ ಸೋಳಂಕಿ, ಕಿರಣ್ ಜಿತೂರಿ, ರಾಜೇಶ್ವರಿ ಹಬೀಬ್, ಸರಸ್ವತಿ ಮೆಹರವಾಡೆ, ಅನಿತಾ ಜಡಿ, ಇತರರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply