ಅಂತರಂಗ-ಬಹಿರಂಗ ಶುದ್ಧಿ

0

ಡಾ. ಈಶ್ವರಾನಂದ ಸ್ವಾಮೀಜಿ

ದೇವರ ಸಾಕ್ಷಾತ್ಕಾರಕ್ಕೆ ನಮ್ಮ ಭಾರತೀಯ ಪರಂಪರೆಯು ಬಹ ಪ್ರಾಮುಖ್ಯತೆಯನ್ನು ಕೊಟ್ಟಿರುವುದು ನಮ್ಮ ಇತಿಹಾಸದ ಪುಟಗಳಲ್ಲಿ ಕಾಣುತ್ತೇವೆ. ಇದುವೇ ಮಾನವನ ಪರಮ ಗುರಿಯಂದು ನಂಬಿದ್ದಾರೆ. ಇದೇ ಪರಂಪರೆಯಲ್ಲಿ ಬಂದಿರುವ ನಮ್ಮ ಶಿವಶರಣರು ದೇವರ ಒಲಿಮೆಗೆ ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ಕೊಟ್ಟಿದ್ದಾರೆ. ಅದಕ್ಕೆಂತಲೇ ಬಸವೇಶ್ವರರು ಈ ವಚನ ಹೇಳಿರಬಹುದು.
ಕಳಬೇಡ ಕೊಲಬೇಡ ಹುಸಿಯನುಡಿಯಲುಬೇಡ
ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನಬಣ್ಣಿಸಬೇಡ ಇದುರುಹಳಿಯಲುಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವರನೊಲೊಸುವ ಪರಿ.
ಪ್ರಸ್ತುತ ವಚನದಲ್ಲಿ ಮಾನವನ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಪರಮತ್ಮನ ಒಲುಮೆಸಾಧ್ಯ ಅದನ್ನು ಇಲ್ಲಿರುವ ಸಪ್ತಸೂತ್ರಗಳ ಮೂಲಕ ಸಾಧಿಸಿಕೊಳ್ಳಬೇಕು. ಎನ್ನುವುದೇ ಶರಣರ ಆಶಯ.
ಅವರೇ ಇನ್ನೊಂದು ವಚನದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಲ್ಲದೆ ಹಲವು ವರ್ಷ ತಪಸ್ಸು ಮಾಡಿದರೆ ಹುತ್ತವ ಬಡಿದು ಹಾವನ್ನು ಸಾಯಿಸಿದಂತೆ ಎಂದು ಭೋದಿಸಿದ್ದಾರೆ. ಆ ವಚನ ಹೀಗಿದೆ-
ಹುತ್ತವ ಬಡಿದೊಡೆ ಹಾವು ಸಾಯಬಲ್ಲದೆ ಅಯ್ಯಾ
ಅಘೋರ ತಪವ ಮಾಡಿದಡೇನು? ಅಂತರಂಗ ಆತ್ಮ
ಶುದ್ಧವಿಲ್ಲದರ ಎಂತು ಮೆಚ್ಚುವನಯ್ಯಾ ಕೂಡಲಸಂಗಮದೇವಾ.

ಅಂದರೆ ಶರೀರದೊಳಗಿರುವ ಕಾಮಕ್ರೋಧಾದಿಗಳೆಂಬ ಹಾವುಗಳಿಗೆ ಮನೆಮಾಡಿ ಕೊಟ್ಟು, ಹಲವಾರು ವರ್ಷ ತಪಸ್ಸು ಮಾಡುವುದರಿಂದ ಪ್ರಯೋಜನವಾಗುದಿಲ್ಲ. ಅವುಗಳು ಅಂತರಂಗದಲ್ಲಿ ಇಟ್ಟುಕೊಂಡು ದೇವರನ್ನು ಪೂಜಿಸುತ್ತೇನೆ, ಧ್ಯನಿಸುತ್ತೇನೆ ಎಂದರೆ ದೇವರ ಸಾಕ್ಷಾತ್ಕಾರ ಸಾಧ್ಯವಿಲ್ಲ ಎನ್ನುವರು ಬಸವಣ್ಣನವರು. ಅದು ಹಾವನ್ನು ಒಳಗಿಟ್ಟು ಹುತ್ತಕ್ಕೆ ಬಡಿದಂತೆ ಎಂದು ಟಿಕಿಸಿದ್ದಾರೆ. ಆದುರಿಂದಲೇ “ಮನ ಏವ ಕಾರಣಂ ಬಂಧ ಮೋಕ್ಷಯೋಃ” ಎಂದು ಅನುಭಾವಿಗಳು ಹೇಳಿದ್ದಾರೆ. ಅಂದರೆ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹದು ಎಂಬ ಅರ್ಥ ಈ ವಾಕ್ಯದಲ್ಲಿ ಅಡಕವಾಗಿದೆ.

ಅದಕ್ಕೊಂದು ಒಂದು ಉತ್ತಮ ಉದಾಹಣೆ ನೋಡಬಹುದು. ನಾನು ಬಹಳ ಹಿಂದೆ ಕೇಳಿದ ಕಥೆಯಿದು- ಒಮ್ಮೆ ಇಬ್ಬರು ಸ್ನೇಹಿತರು ಜೊತೆಗೂಡಿ ದಾರಿಯಲ್ಲಿ ಹೋಗುತ್ತಿದ್ದರು. ದಾರಿಯಲ್ಲಿ ಒಂದು ಸುಂದರ ಮಂದಿರ. ಅಲ್ಲಿ ಶಿವಸಂಕೀರ್ತನೆ ನಡಿತಾಯಿತ್ತು. ಅದನ್ನು ಕಂಡ ಆ ಇಬ್ಬರಲ್ಲಿ ಒಬ್ಬ ತನ್ನ ಸ್ನೇಹಿತನಿಗೆ, ನಡಿಯೊ ಹೋಗೊಣ ಶಿವಸಂಕೀರ್ತನೆ ನಡೆಯುತ್ತದೆ ಕೇಳೊಣ, ಪ್ರವಚನ ಮುಗಿದ ನಂತರ ಪ್ರಸಾದ ಸಿಗುವುದು, ಎಂದು ಕರೆದವನ ಮಾತು ಕೇಳದ ಆ ಗೆಳೆಯ ಎಲ್ಲಿದಪ್ಪ ಪುರಾಣ ಇಂದು ಹೊಸ ಪಿಚ್ಚರ ಬಿಡುಗಡೆಯಾಗಿದೆ. ಅದನ್ನು ನೋಡಲು ಟೀಕೆಟಿಗೆ ಕ್ಯೂ ನಿಲ್ಲಬೇಕು. ನನಗೆ ಆಗಲ್ಲ. ಬೇಕಾದರೆ ನೀನು ಹೋಗು ಎಂದು ಕಳಿಸಿದನು.

ಇಬ್ಬರು ಸ್ನೇಹಿತರು ಒಂದೊಂದು ಕಡೆಗೆ ಹೋದರು. ಮಂದಿರದಲ್ಲಿ ಶಿವಸಂಕೀರ್ತನ ಕೇಳಲು ಕುಳಿತವನು ತನ್ನ ಗೆಳೆಯನ ಜೊತೆಗೆ ಫಿಲ್ಮ ನೋಡಿ ಎಂಜಾಯ ಮಾಡಬಹುದಿತ್ತು ಎಂದು ಮನದಲ್ಲಿ ಪ್ರವಚನ ಕೇಳದೆ ಅದನ್ನೇ ಮತ್ತೆ ಮತ್ತೆ ಮೇಲಕು ಹಾಕತೋಡಗಿದನು. ಆದರೆ ಫಿಲ್ಮ ನೋಡನು ಹೋದ ಗೆಳೆಯ ತನ್ನ ಗೆಳೆಯನ ಜೊತೆಗೆ ಶಿವಶಂಕೀರ್ತನ ಕೇಳಿ ಪ್ರಸಾದ ತಿಂದಿದ್ದರೆ ಸ್ವಲ್ಪವಾದರೂ ಪುಣ್ಯ ಸಿಗುತಿತ್ತು ಎಂದು ಫಿಲ್ಮ ನೋಡದೆ ಚಿಂತಿಸತೋಡಗಿದ. ಹೀಗೆ ಇಬ್ಬರು ತದ್ವಿರುದ್ಧವಾಗಿ ವಿಚಾರ ಮಾಡಿದರು. ಮರುದಿವಸ ಇಬ್ಬರು ಒಟ್ಟಿಗೆ ಸೇರಿದಾಗ ಒಬ್ಬರಿಗೊಬ್ಬರು ಇವನು ನಿನ್ನೆ ಪ್ರವಚದಲ್ಲಿ ಏನು ಹೇಳಿದರು? ಪ್ರಸಾದ ಏನು ಕೊಟ್ಟರು? ಎಂದು ಕೇಳಿದರೆ, ಅವನು ನಿನ್ನೆ ಯಾವ ಫಿಲ್ಮ ನೊಡಿದಿಯಾ? ಚನ್ನಗಿತ್ತಾ? ಎಂದು ಕೇಳುವನು. ಆದರೆ ಅವರಿಬ್ಬರು ತಾವು ಮಾಡಿದ ಕಾರ್ಯದಲ್ಲಿ ಅವರಿರಲಿಲ್ಲ. ಅದಕ್ಕೆ ಉತ್ತರವು ಒಬ್ಬರಿಗೊಬ್ಬರು ಸರಿಯಾಗಿ ಹೇಳಿಕೊಳ್ಳದೆ ಸಮಾದಾನಕ್ಕಾಗಿ ತಿಳಿದಷ್ಟು ಹೇಳಿಕೊಂಡರು

ಕಾಲಾನಂತರಲ್ಲಿ ಇಬ್ಬರು ದೈವಾಧೀನವಾದಾಗ ಫಿಲ್ಮ ನೋಡಿದವನು ಸ್ವರ್ಗದಲ್ಲಿ, ಪ್ರವಚನ ಕೇಳಿದವನು ನರಕದಲ್ಲಿ ಇದ್ದರು. ಹೀಗೆಕೆ ಎಂದು ಇವರಿಬ್ಬರು ಅಲ್ಲಿ ಧೂತರಿಗೆ ನಾವಿಬ್ಬರು ಒಳ್ಳೆಯ ಸ್ನೇಹಿತರು, ಯಾವಾಗಲೂ ಕೂಡಿಯೇ ಇರುತಿದ್ದೇವೆ ಇಲ್ಲಿ ಏಕೆ ದೂರ ಮಾಡಿದ್ದಿರಿ ಎಂದು ಕೇಳಿದಾಗ, ಅವರು ನೀನು ಪ್ರವಚನದಲ್ಲಿ ಕುಳಿತರೂ ಫಿಲ್ಮ ಬಗ್ಗೆ ಚಿಂತೆ ಮಡಿದ್ದಿಯಾ, ಹಾಗೂ ನೀನು ಫಿಲ್ಮ ನೋಡುತ್ತ ಇದ್ದರೂ ಪ್ರವಚನ ಬಗ್ಗೆ ಚಿಂತನೆ ಮಾಡಿದ್ದಿಯಾ ಅದಕ್ಕಾಗಿ ನಿಮಗೆ ಈ ಗತಿ ಲಭೀಸಿದೆ ಎಂದು ತಳಿ ಹೇಳಿದ್ದರು.

ಆದುದರಿಂದ ಈ ಉದಾಹರಣೆಯಿಂದ ತಿಳಿಯುವುದು ಎನೆಂದರೆ, ನಾವು ಮಾಡುವ ಕಾರ್ಯದಲ್ಲಿ ಸಂಪೂರ್ಣವಾದ ಮನಸ್ಸಿರಬೇಕು ಅದಕ್ಕೆ ತಕ್ಕ ಪ್ರತಿಫಲ ಸಿಗುವುದು. ಅಂತರಂಗ ಮತ್ತು ಬಹಿರಂಗ ಶುದ್ಧಿಗಾಗಿ ಇದೊಂದು ಸಾಧನವಾಗಿದೆ. ಈ ಸಾಧನೆಯ ಜೊತೆಗೆ ಬಸವಣ್ಣನವರ ಈ ಮೇಲಿನ ವಚನವನ್ನು ಪಾಲಿಸಿದಾಗ ಸಂಪೂರ್ಣವಾಗಿ ಭಗವಂತನ ಕರುಣೆಯಾಗಿ ಅವನ ಒಲುಮೆಯಿಂದ ಸಾಧಕ ತನ್ನ ಗುರಿ ಸೇರುವನು. ಎನ್ನುವುದೇ ಎಲ್ಲ ಮಹಾತ್ಮರ ಕಳಕಳಿಯಾಗಿದೆ. ಅದನ್ನು ಪಾಲಿಸಿದರೆ ಅವರ ಋಣ ತೀರಿಸಿದಂತೆ ಆಗುತ್ತದೆ. ಅದಕ್ಕಾಗಿ ತಾವೆಲ್ಲ ಒಟ್ಟಾಗಿ, ಒಂದೇ ಮನಸ್ಸಿನಿಂದ ಬೇಧ ಭಾವವಿಲ್ಲದೆ ಸಾಮಾಜಿಕ, ಧಾರ್ಮಿಕ, ಮೊದಲಾದ ಸ್ಥಾನಗಳಲ್ಲಿ ಶ್ರಮಿಸಿ ಅದಕ್ಕೆ ಉತ್ತಮ ಪ್ರತಿಫಲ ಪಡೆಯಿರಿ. ಇದು ಕೇವಲ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಮಾತ್ರ ಎನ್ನುವುದನ್ನು ಸದಾ ನೆನಪಿಡಿ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply