ಬಳ್ಳಾರಿ-ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜನಿ ಪೀಠಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ದಿಢೀರ ಭೇಟಿ ನೀಡಿದ್ದಾರೆ. ಉತ್ತರ ಕರ್ನಾಟಕ ಪ್ರವಾಸದಲ್ಲಿ ಉರುವ ಅವರು ಕೊಟ್ಟೂರು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ಉಜ್ಜನಿ ಪೀಠದ ಭಕ್ತರೊಂದಿಗೆ ಭೇಟಿ ನೀಡಿದ್ದಾರೆ. ಉಜ್ಜನಿ ಪೀಠಕ್ಕೆ ಬೇಟಿ ನೀಡಿದ ಅವರು ಪೀಠಾಧಿಪತಿಗಳಾದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿ ಆರ್ಶೀವಾದ ಪಡೆದರು. ಕಳೆದ ಎರಡು ತಿಂಗಳಿಂದ ಫೀಠಾಧಿಪತಿಗಳ ವಿವಾದದಿಂದ ಉಜ್ಜಿನಿ ಶ್ರೀಗಳು ಸುದ್ದಿಯಲ್ಲಿ ಇದ್ದರು . ಹೀಗಾಗಿ ಈಶ್ವರಪ್ಪ ಅವರ ಬೇಟಿ ಹಿಂದೆ ಪೀಠಾಧಿಪತಿಗಳ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಾಳೆ ಹೊನ್ನೂರಿನ ರಂಭಾಪುರಿ ಪೀಠಾಧಿಪತಿಗಳು ಉಜ್ಜನಿ ಪೀಠಕ್ಕೆ ಮತ್ತೊಬ್ಬ ಸ್ವಾಮೀಜಿ ಅವರನ್ನ ನೇಮಕ ಗೊಳಿಸಿದ್ದರು. ಅದರ ಬೆನ್ನಲ್ಲೇ ಸಚಿವರಾದ ಶ್ರೀರಾಮುಲು ಹಾಗೂ ಈಶ್ವರಪ್ಪ ಭೇಟಿ ನೀಡಿರೋದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ..

suddinow.com
suddinow.com