ಸುಮಲತಾ ಅಂಬರೀಷ್ ರಾಜಕಾರಣಕ್ಕೆ ಬರಲು ಕುಮಾರಸ್ವಾಮಿ ಮಾಡಿದ ಅಪಮಾನವೇ ಕಾರಣ

0

ಬೆಂಗಳೂರು  – ಸುಮಲತಾ ಹಾಗೂ ಎಚ್ ಡಿ ಕುಮಾರಸ್ವಾಮಿ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತಿಲ್ಲಾ. ಈ ನಡುವೆ ದಿವಂಗತ ಅಂಬರೀಶ್ ಅವರನ್ನು ಈ ಜಗಳದಲ್ಲಿ ಎಳೆದು ತಂದಿದ್ದು, ಎಚ್ ಡಿ ಕುಮಾರಸ್ವಾಮಿ ಮೇಲೆ, ಕನ್ನಡದ ಚಿತ್ರರಂಗ ತಿರುಗಿ ಬಿದ್ದಿದೆ.

ಇದೇ ವಿಚಾರವಾಗಿ ಮಾತನಾಡಿ ಕನ್ನಡದ ಹಿರಿಯ ನಟ ದೊಡ್ಡಣ್ಣಾ ಅವರು ಸಹ ಎಚ್ ಡಿ ಕೆ ಅವರಿಗೆ ಟಾಂಗ್ ನೀಡಿದ್ದಾರೆ. ಕುಮಾರಸ್ವಾಮಿ ನನ್ನ ಮುಖದ ಮೇಲೆ ಪೇಪರ್ ಎಸೆದಿದ್ದು ನಿಜ. ಸುಮಲತಾ ಅಂಬರೀಷ್ ರಾಜಕಾರಣಕ್ಕೆ ಬರಲು ಕುಮಾರಸ್ವಾಮಿ ಮಾಡಿದ ಅಪಮಾನವೇ ಕಾರಣ ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ಅಂಬರೀಷ್ ಸ್ಮಾರಕ ವಿಚಾರ ಸಂಬಂಧ ಭೇಟಿಗೆ ಹೋದಾಗ ಕುಮಾರಸ್ವಾಮಿ ನನಗೆ  ಅವಮಾನ ಮಾಡಿದ್ದು ನಿಜ. ಆಗ ನಟ ಶಿವರಾಮ್ ಧೈರ್ಯ ಹೇಳಿದರು. ನಿಮ್ಮ ಕಣ್ಣಲ್ಲಿ ಯಾಕೆ‌ ಕಣ್ಣೀರು ಬರುತ್ತೆ. ಯಾರಿಗಾಗಿ ಕಣ್ಣೀರು ಹಾಕುತ್ತೀರಾ. ನಮಗಿಂತ ಚೆನ್ನಾಗಿ ನಿಮಗೆ ನಟನೆ ಬರುತ್ತೆ ಎಂದು ವ್ಯಂಗ್ಯವಾಡಿದರು ಎಂದಿದ್ದಾರೆ. ಸುಮಲತಾ ಅವರು ರಾಜಕೀಯಕ್ಕೆ ಬರಲು ಕಾರಣ ಅಂದು ಮಾಡಿದ ಅಪಮಾನವೇ ಕಾರಣ ಹೀಗಾಗಿ ಸುಮಲತಾ ಅವರು ರಾಜಕೀಯಕ್ಕೆ ಬಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನೀವು ನಿರ್ಮಾಪಕರಾಗಿ ಕೆಲಸ ಮಾಡಿದ್ದೀರಾ. ಇನ್ನು ಮುಂದಾದರೂ ಮಾತನಾಡುವಾಗ ಎಚ್ಚರ ವಹಿಸಿ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply