ಬಳ್ಳಾರಿ- ಕುಡತಿನಿ ಕೈಗಾರಿಕಾ ಪ್ರದೇಶದಲ್ಲಿ ಸುತ್ತಮುತ್ತಲಿನ ಸಣ್ಣ ಮತ್ತು ಬೃಹತ್ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಮತ್ತು ರಸ್ತೆಯಲ್ಲಿನ ಧೂಳು ನಿಯಂತ್ರಣಕ್ಕಾಗಿ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದಿಗೆ ೫ನೇ ದಿನಕ್ಕೆ ಕಾಲಿಟ್ಟಿದೆ.  ಕರ್ನಾಟಕ ಜನಸೈನ್ಯ ಸಂಘಟನೆಯು ಈ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ,  ಇಂದು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಜನಸೈನ್ಯದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ. ಯರಿಸ್ವಾಮಿ ಅವರು, ವೇಣಿ ವೀರಾಪುರದ ಹತ್ತಿರವಿರುವ ೪ ಮೆದು ಕಬ್ಬಿಣ ಉತ್ಪನ್ನ ಮಾಡುವ ಕಾರ್ಖಾನೆಗಳು ಕಪ್ಪು ವಿಷ ಅನಿಲ ಮತ್ತು ಕಪ್ಪು ದೂಳು ಶೇಕಡಾ ೯೦ ರಷ್ಟು ಇರುವುದು ಇದೀಗ ೧೮೦ ರಿಂದ ೨೩೦ಕ್ಕೆ ಏರಿದೆ. ಇದರಿಂದ ಕುಡತಿನಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಆರೋಗ್ಯದ ದೃಷ್ಟಿಯಿಂದ ಈ ನಾಲ್ಕು ಕಾರ್ಖಾನೆಗಳ ವಿರುದ್ಧ ಮಾತ್ರವಲ್ಲ ಎಲ್ಲಾ ಕಾರ್ಖಾನೆಗಳಲ್ಲಿ ಯಾವುದೇ ರೀತಿಯ ಸೂಕ್ತ ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕುವ ಕ್ರಮಗಳನ್ನು ಕೈಗೊಳ್ಳದಿರುವುದು ದುರಾದೃಷ್ಟಕರ. ಇದರಿಂದ ವಿಶೇಷವಾಗಿ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಅವಕಾಶ ಹೆಚ್ಚಾಗಿದೆ. ಆದಕಾರಣ ಪ್ರತಿಯೊಂದು ಕಾರ್ಖಾನೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಶೇಕಡಾ  ೩೦ರಷ್ಟು ಗಿಡಮರಗಳನ್ನು ಬೆಳೆಸುವುದು ಕಡ್ಡಾಯವಾಗಬೇಕಾಗಿತ್ತು. ಅದರ ಜೊತೆಗೆ ಅಲ್ಲಿನ ಕಾರ್ಮಿಕರ ಮುಂಜಾಗ್ರತಾ ಪರಿಕರಗಳಾದ ಮುಖಮುಸುಗು, ಹೆಲ್ಮೆಟ್, ಗ್ಲೌಸ್, ಶೂಸ್ ಇನ್ನಿತರ ಯಾವುದೇ ಪರಿಕರಗಳನ್ನು ನೀಡದೇ ಕಾರ್ಮಿಕರನ್ನು ವಂಚಿಸುತ್ತಿರುವುದು ಕರ್ನಾಟಕ ಜನಸೈನ್ಯ ಸಂಘಟನೆಯು ತೀವ್ರವಾಗಿ ಖಂಡಿಸಿದ್ದಾರೆ

About Author

Priya Bot

Leave A Reply