ಹಾಸನ- ಹಾಸನಧ ಹೊರವಲಯದಲ್ಲಿ ಇಂದು ಜವರಾಯ ತನ್ನ ಅಟ್ಟಹಾಸ ಮೆರೆದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ. ಹಾಸನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟು ೧೪ ಮಂದಿ ಗಾಯಗೊಂಡಿದ್ದಾರೆ. ಹಾಸನ ನಗರದ ಹೊರವಲಯದ ಕೆಂಚಟ್ಟಳ್ಳಿ ಬಳಿ ಬೆಂಗಳೂರು, ಮಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೃತರನ್ನು ಪ್ರದೀಪ್ ಕುಮಾರ್, ಚಂದ್ರಶೇಖರ್, ನವೀನ್ ಕುಮಾರ್, ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಟಾಟಾ ಸೊಮೋಗೆ ಹಿಂಬದಿಯಿಂದ ಕ್ವಾಲೀಸ್ ಕಾರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕ್ವಾಲಿಸ್ ಕಾರ್‌ನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇತ್ತ ಅಪಘಾತದ ತೀವ್ರತೆಗೆ ಟಾಟಾಸುಮೋ ಪಲ್ಟಿಯಾಗಿದ್ದು, ಅದರಲ್ಲಿದ್ದ ಹತ್ತು ಮಂದಿಯೂ ಗಾಯಗೊಂಡಿದ್ದು ಎಲ್ಲರೂ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಂಚಟ್ಟಳ್ಳಿ ಬಳಿ ಹಂಪ್ ಇದ್ದು, ಟಾಟಾಸುಮೋ ಹಂಪ್ ಬಳಿ ಸ್ಲೋ ಮಾಡಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ವಾಲಿಸ್ ಡಿಕ್ಕಿಯೊಡೆದಿದೆ. ಟಾಟಾಸುಮೋದಲ್ಲಿದ್ದ ಎಲ್ಲರೂ ಮಳಬಾಗಿಲು ಮೂಲದವರಾಗಿದ್ದ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕ್ವಾಲಿಸ್‌ನಲ್ಲಿದ್ದವರು ಕೆಜಿಎಫ್ ಮೂಲದವರಾಗಿದ್ದು ಉಡುಪಿಗೆ ಮದುವೆಗೆ ಹೋಗುತ್ತಿದ್ದರು. ವಿಷ್ಯ ತಿಳಿದ ತಕ್ಷಣ ಸಂಚಾರಿ ಪೊಲೀಸರು, ಹಾಸನ ಎಸ್‌ಪಿ ಶ್ರೀನಿವಾಸ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply