ಲಕ್ಷ್ಮೇಶ್ವರ – ಲಕ್ಷ್ಮೇಶ್ವರ ಪುರಸಭೆಯ ಸ್ಥಾಯಿ ಸಮಿತಿಯ ಸಭೆ ಇಂದು ನಡೆಯಿತು ಆ ಸಭೆಗೆ ಸಮಿತಿಯ ಸರ್ವ ಸದಸ್ಯರು ಹಾಜರಾಗಿದ್ದರು. ಸಭೆಯಲ್ಲಿ ಅಧ್ಯಕ್ಷ ಸ್ಥಾನದ ಆಯ್ಕೆಯ ಪ್ರಕ್ರಿಯೆ ಆರಂಭವಾದಾಗ ಸರ್ವ ಸದಸ್ಯರು ಜೆಡಿಎಸ್ ಪಕ್ಷದ ನಾಲ್ಕನೇ ವಾರ್ಡಿನ ಪುರಸಭೆಯ ಚುನಾಯಿತ ಸದಸ್ಯರಾದ ಶ್ರೀ ಮುಸ್ತಾಕ್ ಅಹ್ಮದ್ ಶಿರಹಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದ ಶ್ರೀ ಮುಸ್ತಾಕ ಅಹ್ಮದ್ ಶಿರಹಟ್ಟಿ ಅವರು ನಾನು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ  ಸಮಿತಿಯ ಸರ್ವ ಸದಸ್ಯರಿಗೂ ನಾನು ಸ್ಥಾಯಿ ಸಮಿತಿಯ ಅಧ್ಯಕ್ಷನಾಗಲು ಶ್ರಮಿಸಿದ ಜೆಡಿಎಸ್ ಪಕ್ಷದ ನಾಯಕರಿಗೆ ಪ್ರೀತಿಯ ಧನ್ಯವಾದಗಳನ್ನು ತಿಳಿಸಿದರು. ತದನಂತರ ನೂತನ ಅಧ್ಯಕ್ಷರಿಗೆ ಪುರಸಭೆಯ ಆಡಳಿತ ಮಂಡಳಿ. ಮುಖ್ಯ ಅಧಿಕಾರಿಗಳು ಪುರಸಭೆ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಜೆಡಿಎಸ್ ಪಕ್ಷದ ನಾಯಕರು ಕಾರ್ಯಕರ್ತರು ಪುಷ್ಪಮಾಲೆ ಹಾಕುವುದರ ಮುಖಾಂತರ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರು ಉಪಾಧ್ಯಕ್ಷರಾದ ಶ್ರೀ ರಾಮಣ್ಣ ಗಡದವರ್ ಪುರಸಭೆ ಸದಸ್ಯರಾದ ಶ್ರೀ ಪ್ರವೀಣ್ ಕುಮಾರ ಬಾಳಿಕಾಯಿ. ಶ್ರೀ ಮಹೇಶ್ ಹೊಗೆಸೊಪ್ಪಿನ. ಶ್ರೀ ಬಸವರಾಜ ಓದಣ್ಣನವರ. ಶ್ರೀ ರಾಜಣ್ಣ ಕುಂಬಿ. ಶ್ರೀಮತಿ ಅಶ್ವಿನಿ ಅಂಕಲಕೋಟಿ. ಜೆಡಿಎಸ್ ಪಕ್ಷದ ಯುವ ನಾಯಕರಾದ ವಿಜಯಕುಮಾರ ಆಲೂರ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಲಕ್ಷ್ಮೇಶ್ವರ 4 ನೇ ವಾರ್ಡಿನ ಜನತೆಯು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply