ಬಳ್ಳಾರಿ- ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜೆ.ಎಸ್.ಡಬ್ಲ್ಯೂ ಸಹಯೋಗದೊಂದಿಗೆ ತೋರಣಗಲ್ಲುವಿನಲ್ಲಿರುವ ಜಿಂದಾಲ್ ಕಾರಖಾನೆ ಆವರಣದಲ್ಲಿ ತುರ್ತು ಸಂದರ್ಭದಲ್ಲಿನ ಹೊರ ವಲಯದ ಸುರಕ್ಷತಾ ಅಣಕು ಪ್ರದರ್ಶನ ಇಂದುಜರುಗಿತು.

ಗ್ಯಾಸ್ ಹೋಲ್ಡರ್ ನಿಂದ ಕೋರೆಕ್ಸ್ ಅನಿಲ ಸೋರಿಕೆಯು ಕೆಲವು ಭಾಗಗಳಾದ ಜಿಂದಾಲ್ ವಿಮಾನ ನಿಲ್ದಾಣ, ವಿದ್ಯಾನಗರ ಟೌನ್ ಶಿಪ್ ಮತ್ತು ವಡ್ಡು ಗ್ರಾಮದ ಮೇಲೆ ಪರಿಣಾಮ ಬಿರುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಮುಂದಾಲೋಚನೆಯಿಂದ ಈ ಅಣಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಣಕು ಪ್ರದರ್ಶನವು ತುರ್ತು ಪರಿಸ್ಥಿತಿಯಲ್ಲಿ ಅಪಾಯಗಳು, ಸಂಪನ್ಮೂಲಗಳ ಕ್ರೋಢೀಕರಣ, ಸುರಕ್ಷಿತ ಸ್ಥಳಾಂತರಿಸುವಿಕೆ ಮತ್ತು ಪುನರ್ವಸತಿಗಳ ಬಗ್ಗೆ ಸಿಬ್ಬಂದಿಗಳಲ್ಲಿ ಹಾಗೂ ಸಮುದಾಯದಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಿತು.

ಈ ಅಣಕು ಪ್ರದರ್ಶನವನ್ನು ಅಗ್ನಿಶಾಮಕ, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ,ಕಾರ್ಖಾನೆಗಳು ಮತ್ತು ಬಾಯ್ಲರ್, ಮಾಲಿನ್ಯ ನಿಯಂತ್ರಣ ಮಂಡಳಿ, ಪಶುಸಂಗೋಪನೆ ಇಲಾಖೆ, ನಾಗರಿಕ ರಕ್ಷಣಾ ಇಲಾಖೆ, ರೆಡ್ ಕ್ರಾಸ್, ಹೋಮ್ ಗಾರ್ಡ್, ವಡ್ಡು ಪಂಚಾಯತ್, ಜೆಎಸ್ಡಬ್ಲ್ಯೂ ಸ್ಟೀಲ್, ಎನರ್ಜಿ, ಸಿಮೆಂಟ್, ಇಸಿಪಿಎಲ್, ಎಸ್ಐಪಿ, ಜೆಎಸ್ಎಸ್ಎಲ್, ಬಿಟಿಪಿಎಸ್ ಮತ್ತು ಜಿಂದಾಲ್ ಸಂಜೀವನಿ ಆಸ್ಪತ್ರೆ ಈ ಅಣುಕು ಪ್ರದರ್ಶನ ಬೆಂಬಲಿಸಿವೆ.  ತುರ್ತು ಪರಿಸ್ಥಿತಿಗಾಗಿ ತಯಾರಿ ಮಾಡುವ ಪ್ರಾಮುಖ್ಯತೆ ಮತ್ತು ಅಪಾಯಕಾರಿ ಅನಿಲ ಸೋರಿಕೆಯನ್ನು ತಡೆಗಟ್ಟಲು ಮತ್ತು ಒಳಗೊಂಡಿರುವ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ವಿವರಿಸಿದರು.

About Author

Priya Bot

Leave A Reply