ಉದ್ಯೋಗ ಅರಸಿ ಗುಳೇಹೊರಟ ತಾಂಡವಾಸಿಗಳು

0

ವಿಜಯನಗರ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಬಂಡೇ ಬಸಾಪುರ ತಾಂಡದ ಸುಮಾರು 1500 ಜನ. ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಗೋವಿಂದಗಿರಿ ತಾಂಡದಿಂದ 500 ಜನರು, ಕೆಲಸ ಹುಡುಕಿಕೊಂಡು ಮಂಡ್ಯ ಮದ್ದೂರು ಕಡೆ ಗುಳೇ ಹೋಗಿದ್ದಾರೆ.

ಇದು ಹಲವು ದಶಕಗಳಿಂದ ಪ್ರತಿ ವರ್ಷ ಜರುಗುವ ಪ್ರಕ್ರಿಯೆ ಯಾಗಿದೆ, ಗುಳೇ ಹೋಗುವುದರಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳು ಹಾಗೂ ವೃದ್ಧರು ಅನಾರೋಗ್ಯದಿಂದ ಬಳಲುವಂತಾಗಿದ್ದು, ತಾಲೂಕಾಡಳಿತ ಗುಳೇ ಹೋಗುವುದನ್ನ ತಪ್ಪಿಸಬೇಕಿದೆ. ಇದಕ್ಕಾಗಿ ಉದ್ಯೋಗ ಸೃಷ್ಟಿಸಬೇಕಿದೆ ಅದಕ್ಕಾಗಿ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ.

ಕೂಡ್ಲಿಗಿ ತಾಲೂಕು ಬಹುತೇಕ ತಾಂಡಾಗಳಿಂದ ಜನರು ಉದ್ಯೋಗ ಅರಸಿಕೊಂಡು ಗುಳೆ ಹೋಗುವುದು ಸರ್ವೆಸಾಮಾನ್ಯ. ಪ್ರತಿವರ್ಷವೂ ಇಲ್ಲಿನ ಬಹುತೇಕ ಕುಟುಂಬಗಳು ಕೆಲಸ ಅರಸಿಕೊಂಡು ಗುಳೆ ಹೋಗುತ್ತಾರೆ. ಆದ್ರೆ ಸರ್ಕಾರ ಈವರೆಗೂ ಇಲ್ಲಿನ ಜನರಿಗೆ ಶಾಶ್ವತ ಪರಿಗಾರ ಕಂಡುಕೊಂಡಿಲ್ಲಾ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply