ಧಾರವಾಡ- ದೇವಸ್ಥಾನದಲ್ಲಿದ ಹುಂಡಿಯ ಬಾಗಿಲು ಮುರಿದು ಕಳ್ಳನೊಬ್ಬ ನಗದು ದೊಚ್ಚಿರುವ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ದ್ಯಾಮವ್ವನ ದೇವಸ್ಥಾನದಲ್ಲಿ ಓರ್ವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ. ಕಳ್ಳನ ಕರಾಮತ್ತು ದೇವಸ್ಥಾನದ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದಿದ್ದಾರೆ.
ನಡುರಾತ್ರಿಯಲ್ಲಿ ದೇವಸ್ಥಾನಕ್ಕೆ ನುಗ್ಗಿದ ಕತರ್ನಾಕ ಆಸಾಮಿ ಕಳ್ಳನ್ನು, ದೇವಸ್ಥಾನದ ಹುಂಡಿಯ ಬಾಗಿಲನ್ನು ಗುದ್ದಲ್ಲಿ ಸಾಹಾಯದಿಂದ ಮುರಿದು, ಹುಂಡಿಯಲ್ಲಿದ ಹಣವನ್ನು ದೊಚ್ಚಿ ಪರಾರಿಯಾಗಿದ್ದಾನೆ. ಅಲ್ಲದೆ ಮತ್ತೆ ಅದರ ಬಾಗಿಲವನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮುಚ್ಚಿ ಹೋಗಿದ್ದು, ಕಳೆದ ತಿಂಗಳ ಅಂದರೆ ಮಾರ್ಚ್ 17 ತಾರಿಖಿನಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಪರಿಶೀಲನೆವೇಳೆ ಕಳ್ಳತನವಾಗಿರುವ ಕುರಿತು ಗ್ರಾಮಸ್ಥರ ಗಮನಕ್ಕರ ಬಂದಿದೆ.
ಈಗ ಗ್ರಾಮಸ್ಥರೆಲ್ಲರೂ ಚರ್ಚೆ ನಡೆಸಿ ಧಾರವಾಡ ಗ್ರಾಮೀಣ ಪೊಲೀಸ ಠಾಣೆಗೆ ಇಂದು ದೂರು ನೀಡಲು ಮುಂದಾಗಿದ್ದಾರೆ ಎಂದು ದೇವಸ್ಥಾನದ ಮೂಲಗಳಿಂದ ತಿಳಿದು ಬಂದಿದೆ.