ಚಾಮರಾಜನಗರ- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹ ಮೂರ್ತಿ ಅವರು ನಾಮಪತ್ರ ಸಲ್ಲಿಸಿದರು. ನಾಡಿನ ಪ್ರಸಿದ್ಧ ಕವಿಗಳು ಹಾಗೂ ಜಾನಪದ ದಾರ್ಶನಿಕರು ಹಾಗೂ ಕಲಾವಿದರ ಭಾವಚಿತ್ರಗಳನ್ನು ಹಿಡಿದ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಇಲ್ಲಿನ ತಾಲ್ಲೂಕು ಕಚೇರಿಗೆ ಬಂದ ಸಿ.ಎಂ.ನರಸಿಂಹ ಮೂರ್ತಿ, ಸಹಾಯಕ ಚುನಾವಣಾಧಿಕಾರಿ ಮಹದೇವಶೆಟ್ಟಿ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಹಲವು ಮಹತ್ವಾಂಕಾಂಕ್ಷೆ ಇಟ್ಟುಕೊಂಡು ಕಸಾಪ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ಹಾಗೂ ರಾಜ್ಯದಲ್ಲೇ ಜಿಲ್ಲೆಯು ಇತಿಹಾಸ ಸೃಷ್ಟಿಸುವಂತಹ ಕೆಲಸ ಮಾಡುವುದು ನನ್ನ ಪ್ರಮುಖ ಗುರಿಯಾಗಿದೆ. ಹಾಗಾಗಿ ಕನ್ನಡ ಸಹೃದಯ ಮತದಾರರು ಕನ್ನಡ ಕಟ್ಟುವ ನನ್ನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ಜಾನಪದ ದಾರ್ಶನಿಕರಾದ ಮಲೆ ಮಹದೇಶ್ವರ, ಮಂಟೇಸ್ವಾಮಿ, ಹಿರಿಯ ನಟ ರಾಜಕುಮಾರ್‌ ಹಾಗೂ ಕನ್ನಡದ ರಾಷ್ಟ್ರ ಕವಿಗಳಾದ ಕುವೆಂಪು ಹಾಗೂ ಜಿ.ಎಸ್‌.ಶಿವರುದ್ರಪ್ಪ ಸೇರಿದಂತೆ ನಾಡು ನುಡಿಗಾಗಿ ದುಡಿದ ಜೀವಗಳನ್ನು ಗೌರವಿಸುವ ಮೂಲಕ ನಾಮಪತ್ರ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.

 ಹಿರಿಯ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ, ಕಸಾಪ ಹಿರಿಯ ಸದಸ್ಯರಾದ ಕೃಷ್ಣನಾಯಕ, ಮಾಂಬಳ್ಳಿ ಅರುಣ್‌ಕುಮಾರ್‌,  ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಉಮ್ಮತ್ತೂರು ಬಸವರಾಜು, ಯಡಿಯೂರು ಮಹದೇವ, ಮನೋಜ್‌ಗೌಡ, ಮಹೇಶ್ ಗೌಡ, ಮುಖಂಡ ರಾಮಸಮುದ್ರ ಪ್ರಸನ್ನ, ಝುಬೇರ್‌, ಶಿಕ್ಷಕರಾದ ಮಹದೇವಯ್ಯ, ಶಿವಮೂರ್ತಿ, ಎಸ್‌ಪಿಬಿ ಅಭಿಮಾನಿ ಸಂಘದ ಶಿವು, ಕವಿ ಸಿ.ಶಂಕರ ಅಂಕನಶೆಟ್ಟಿಪುರ, ಬಿಎಸ್ಪಿ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ ಹಾಜರಿದ್ದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply