ಗ್ರಾಮಸ್ಥರಿಂದ ಕೆಇಬಿ ಮುತ್ತಿಗೆ

0

ವಿಜಯನಗರ –  ಜಿಲ್ಲೆ ಕೊಟ್ಟೂರು ತಾಲೂಕಿನಉಜ್ಜಯಿನಿ ಗ್ರಾಮದ ಕೆಇಬಿ ವಿತರಣಾ ಕೇಂದ್ರಕ್ಕೆ ಉಜ್ಜಯಿನಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಸದಸ್ಯರು ಮುತ್ತಿಗೆ ಹಾಕಿದರು. ಕಳೆದ ಒಂದು ವರ್ಷದಿಂದ ವಿದ್ಯುತ್ ವಿತರಣೆಯಲ್ಲಿ ನಿರಂತರವಾಗಿ ದೋಷ ಉಂಟಾಗಿದೆ. ಪ್ರತಿದಿನ ಇಪ್ಪತ್ತಕ್ಕೂ ಹೆಚ್ಚು ಬಾರಿ ವಿದ್ಯುತ್ ವ್ಯತ್ಯಯ ಆಗುತ್ತಿರುವುದರಿಂದ ಗ್ರಾಮದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಹಿಟ್ಟಿನ ಗಿರಣಿಗಳು, ಆಸ್ಪತ್ರೆಗಳು, ಅಂಗಡಿಗಳು, ಸಣ್ಣ ಕೈಗಾರಿಕೆಗಳು ವಿದ್ಯುತ್ತನ್ನು ಅವಲಂಬಿಸಿವೆ.

ವಿದ್ಯುತ್ ನಿರಂತರವಾಗಿ ದೊರೆಯದೇ ಇರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೂ ತೊಂದರೆಯಾಗುತ್ತಿದೆ. ಜನತೆ ಕೆಇಬಿಯ ಇಲಾಖೆಯನ್ನು ದೂರುತ್ತಿದ್ದಾರೆ. ಸಣ್ಣ ಕೈಗಾರಿಕೆಗಳು, ಹಿಟ್ಟಿನ ಗಿರಣಿಗಳು ಸಹ ಕೆಲಸ ನಿರ್ವಹಿಸುತ್ತಿಲ್ಲ‌ ಹೀಗಾಗಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ ಮಳೆಗಾಲದಲ್ಲಿ ಅಷ್ಟೇ ಅಲ್ಲದೆ ಬೇಸಿಗೆಯಲ್ಲಿ ನಿರಂತರ ವಿದ್ಯುತ್ ಇಲ್ಲವೇ ಇಲ್ಲ. ಸಿಬ್ಬಂದಿಯವರನ್ನು ಕೇಳಿದಾಗ ಮಳೆಯಿಂದಾಗಿ ಪದೇಪದೇ ಹೋಗುತ್ತಿದೆ ಎಂದು ಎಂದು ಹೇಳುತ್ತಾರೆ.

ಆದರೆ ಮಳೆಗಾಲ ಇದೀಗ ಆರಂಭವಾಗಿದೆ ನಮ್ಮ ಉಜ್ಜಯಿನಿ ಕೇಂದ್ರಕ್ಕೆ 365 ದಿನವೂ ಮಳೆಗಾಲದ ದಿನಗಳಾಗಿವೆ. ಇದರೊಂದಿಗೆ ಉಜ್ಜಯಿನಿ, ನಿಂಬಳಗೆರೆ, ಗಂಗಮ್ಮನಹಳ್ಳಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಸೇರಿದಂತೆ ಅನೇಕ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಆಗುತ್ತಿರುವುದರಿಂದ ಯಾವುದೇ ಹಳ್ಳಿಯಲ್ಲಿ ಲೈನ್ ಹೋದರೆ ಇಡೀ ಉಜ್ಜಯಿನಿ ಕೇಂದ್ರದ ಸ್ಟೇಷನ್ ಪವರ್ ಕಳೆದುಕೊಳ್ಳುತ್ತದೆ. ಹೀಗಾಗಿ ಉಜ್ಜಯಿನಿ ಕೇಂದ್ರಕ್ಕೆ ಪ್ರತ್ಯೇಕ ಫಿಲ್ಟರ್ ಕೇಂದ್ರವನ್ನು ಹಾಗೂ ಬ್ರೇಕರ್ ಅಳವಡಿಸುವುದಕ್ಕೆ ಕೋರಿ ಮುತ್ತಿಗೆ ಹಾಕಲಾಯಿತು. ಈ ಕುರಿತಾಗಿ ಅಧೀಕ್ಷಕ ಅಭಿಯಂತರರು ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸಂಪರ್ಕಿಸಲಾಯಿತು.

ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವಿಫಲವಾಗುತ್ತಿರುವ ಕೆಇಬಿ ಅಥವಾ ಜೆಸ್ಕಾಂ ಮೇಲೆ ಗ್ರಾಹಕರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಅಥವಾ ಸಮಸ್ಯೆ ಬಗೆಹರಿಯುವ ವರೆಗೂ ಸ್ಥಳದಲ್ಲಿಯೇ ಉಳಿಯುತ್ತೇವೆ ಎಂದು ನೆರೆದಿದ್ದ ಸದಸ್ಯರು ಮಾತನಾಡಿದರು. ಕೋರೋನಾ‌ ಸಾಂಕ್ರಾಮಿಕ‌ ಸಮಸ್ಯೆ ಇರುವುದರಿಂದ ನಾಳೆ ಸ್ಥಳಕ್ಕೆ ಆಗಮಿಸಿ ಕ್ರಮ ವಹಿಸುವುದಾಗಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದರಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು. ಮುಷ್ಕರದ ಸಂದರ್ಭದಲ್ಲಿ ರೇವಯ್ಯ ಒಡೆಯರ್, ಮಂಜು ಸ್ವಾಮಿ, ಸಿದ್ದೇಶ್ ಕುರುಗೋಡು, ಚೌಡಪ್ಪ, ಮುಪ್ಪಿನಪ್ಪ, ರವಿ ವೈ, ರೇವಣಸಿದ್ದಪ್ಪ ಅಲಬೂರು, ದಿವಾನ್ ಸಾಹೇಬ್, ಪ್ರಕಾಶ ಅಂಗಡಿ, ಶಿವಪ್ರಕಾಶ್, ನವೀನ್ ಶೆಟ್ಟಿ, ನಟರಾಜ್ ಮೊದಲಾದವರು ಭಾಗವಹಿಸಿದ್ದರು. ಮನವಿಯನ್ನು ಸಹಾಯಕ ಅಭಿಯಂತರರಾದ ರಮೇಶ್ ಇವರ ಸ್ವೀಕರಿಸಿ ಕೂಡಲೇ ಕ್ರಮವಹಿಸಲು ಮೇಲಾಧಿಕಾರಿಗಳಿಗೆ ಕಳುಹಿಸುತ್ತೇನೆ ಎಂದು ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210606-WA0074.jpg

Email

Nataraja K M Ujjain

About Author

Nataraja K M Ujjain

Leave A Reply