ಬಳ್ಳಾರಿ- ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಸಾಮಾನ್ಯವಾಗಿ ಸಾಮಾನ್ಯ ಜನರು ಮೋಸಕ್ಕೆ ಒಳಗಾಗೋದು ಮಾಮೂಲಿ ಆದ್ರೆ ಇಲ್ಲಿ ಈ ರೀತಿಯ ಪ್ರಕರಣಗಳ ಬಗ್ಗೆ ಅರಿವು ಈರುವ ಪೊಲೀಸ್ ಪೇದೆಯೇ ಮೋಸ ಹೋಗಿದ್ದಾರೆ. ಗಣಿ ನಾಡು ಬಳ್ಳಾರಿಯ ರೇಡಿಯೋ ಪಾರ್ಕ್ ನ ನಿವಾಸಿ ಆರೋಗ್ಯಪ್ಪ ಎಂಬುವವರು 34 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಡಿಮೆ ಬಡ್ಟಿ ದರ ನೀಡಿ

ಹೌಸಿಂಗ್ ಲೋನ್ ಕೊಡಿಸುವುದಾಗಿ ಪೊಲೀಸ್ ಹೆಡ್ ಕಾನ್ಸ್​ಟೇಬಲ್​​​ಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ತಡವಾಗಿ  ಬೆಳಕಿಗೆ ಬಂದಿದೆ. ಪ್ರಸ್ತುತ ಬಳ್ಳಾರಿ‌ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ ಕಾನ್ಸ್​​ಟೇಬಲ್​​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಗ್ಯಪ್ಪ (43) ಅವರಿಗೆ  ಸಂಜಯ್ ಶರ್ಮ ಎಂಬಾತ ಹೌಸಿಂಗ್ ಲೋನ್ ಬೇಕಾ ಎಂದು ಫೋನ್​​ ಕರೆ ಮಾಡಿದ್ದಾರೆ. ಬಳಿಕ ಲೋನ್ ಬಗ್ಗೆ ರಾಜಸ್ಥಾನದಿಂದ ಕಂಪನಿಯೊಂದರಿಂದ ಕವಿತಾದೇವಿ ಎಂದು ಹೇಳಿಕೊಂಡು ಕರೆ ಮಾಡಿ ಮಾಹಿತಿ ನೀಡುತ್ತಾರೆ. 50 ಲಕ್ಷ ರೂ. ಹೌಸಿಂಗ್ ಸಾಲದ ಆಫರ್ ಇದೆ. ವರ್ಷಕ್ಕೆ ಎರಡರಷ್ಟು ಬಡ್ಡಿ ಮಾತ್ರ ಎಂದು  ಮಾಹಿತಿ ನೀಡುತ್ತಾರಡ.  ಇದನ್ನು ನಿಜವೆಂದು ನಂಬಿದ ಆರೋಗ್ಯಪ್ಪ ಅವರು ಹೇಳಿದ ಹಾಗೆ ಅವರ ತಾಳಕ್ಕೆ ಕುನಿದಿದ್ದಾರೆ. ತಮ್ಮ ಮೂಲ ದಾಖಲೆಗಳನ್ನು ವ್ಯಾಟ್ಸ್​​​ ಆ್ಯಪ್ ಮೂಲಕ ಆರ್ಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಎಲ್ಲ ಪ್ರತಿಗಳನ್ನು ಕಳಿಸಿದ್ದರು. ನಿಮಗೆ  50 ಲಕ್ಷ ಹೌಸ್ ಲೋನ್​​ ಮಂಜೂರಾಗಿದೆ. ಅದಕ್ಕೆ ಶುಲ್ಕ ಭರಿಸಬೇಕು ಎಂದು ತಿಳಿಸಿದ್ದಾರೆ. ಕಾರಣ  ಮೊದಲಿಗೆ 93 ಸಾವಿರ ರೂ.‌, ಅಡ್ವಕೇಟ್ ಮತ್ತು ಶೂರಿಟಿ ಶುಲ್ಕಕ್ಕೆ 2 ಲಕ್ಷ 50 ಸಾವಿರ, ಜಿಎಸ್​​ಟಿ 3 ಲಕ್ಷ 98 ಸಾವಿರ ಜೊತೆಗೆ ಇನ್ನಿತರ ಶುಲ್ಕ ಎಂದು ಒಟ್ಟು 22 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಆರ್​​​ಟಿಜಿ‌ಎಸ್ ಮತ್ತು ನೆಫ್ಟ್​​ನಲ್ಲಿ ಪಾವತಿಸುತ್ತಾರೆ. ತದನಂತರ ಆರೋಗಪ್ಪಾ  ಕರೆ ಮಾಡಿದಾಗ ನಂಬರ್ ಸ್ವಿಚ್ ಆಫ್ ಆಗಿದೆ‌ ಬಳಿಕ  ವಂಚನೆಗೊಳಗಾಗಿ ರುವುದು ತಿಳಿದು ಬಂದಿದೆ. ಈ ಮಧ್ಯದಲ್ಲಿ

ಅದೇ ರೀತಿ ನಂತರ ಸಂಜಯ್ ಶರ್ಮ ಎನ್ನುವ ವ್ಯಕ್ತಿ ಸಹ ಪೋನ್ ಮಾಡಿ, 30 ಲಕ್ಷ ಹೌಸ್ ಲೋನ್ ಆಫರ್ ಆಮಿಷವೊಡ್ಡಿ ಆರೋಗ್ಯಪ್ಪ  ಅವರಿಂದ ಹಂತ ಹಂತವಾಗಿ 12 ಲಕ್ಷರೂ.ಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಆರೋಗ್ಯಪ್ಪ ಫೋನ್​ ಕರೆ ನಂಬಿ 34 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಳ್ಳಾರಿ ನಗರ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

About Author

Priya Bot

Leave A Reply