ಕೊಡಗು- ದಿನೇ ದಿನೇ ಕರೋನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವದನ್ನು ತಡೆಯಲು, ಕೊಡಗಿನ ಪ್ರವಾಸಿ ತಾಣಗಳು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದಡ. ಕೊಡಗಿನ ಎಲ್ಲಾ ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳು ಸಂಪೂರ್ಣ ಬಂದ್ ಮಾಡಿದೆ. ಇಂದಿನಿಂದ ಏಪ್ರಿಲ್ 20 ರವರೆಗೆ ಪ್ರವಾಸಿ ತಾಣಗಳು ಬಂದ್

ಪ್ರವಾಸಿಗರು ಮತ್ತು ಸಾರ್ವಜನಿಕರ ವೀಕ್ಷಣೆಗೆ ನಿಷೇಧ ಹೇರಿದೆ. ಪ್ರವಾಸಿ ತಾಣಗಳನ್ನು  ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು  ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನರಿಂದ ತುಂಬಿರುವ ಪ್ರವಾಸಿ ತಾಣಗಳು ಈಗ ಜನರಿಲ್ಲದೆ  ಬಿಕೋ ಎನ್ನುತ್ತಿವೆ. ಇನ್ನು ಬಹುತೇಕ ಜನರಿಗೆ ಜಿಲ್ಲಾಡಳಿತದ ಈ ನಿಷೇಧ ಮಾಡಿರುವ ವಿಷಯ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಬಹುತೇಕ ಜನರು ಕುಟುಂಬ ಸಮೇತವಾಗಿ ಪ್ರವಾಸಕ್ಕೆ ಬಂದಿದ್ದರು, ಆದ್ರೆ ಮಾಹಿತಿ ಇಲ್ಲದೆ ಬಂದವರು ಬೇಸರದಿಂದ ವಾಪಸ್ ಆಗಬೇಕಾದ ಅನಿವಾರ್ಯತೆ ಎದುರಾಗಿತ್ತು….

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply