ಅನಗತ್ಯ ಓಡಾಡುವ ಬೈಕ್ ಸವಾರರಿಗೆ ರಸ್ತೆಯಲ್ಲಿ  ಕೋವಿಡ್ ಟೆಸ್ಟ್

0

ಬಳ್ಳಾರಿ – ಲಾಕ್ ಡೌನ್ ನಲ್ಲಿ ಪಟ್ಟಣದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ತಡೆದು ಅಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಸುವ ವಿನೂತನ ಪ್ರಯತ್ನಕ್ಕೆ ಬಳ್ಳಾರಿ ಜಿಲ್ಲೆಯ  ಪೊಲೀಸರು ಮುಂದಾಗಿದ್ದಾರೆ.‌ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಪೊಲೀಸ್ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು ಜನರು ಕೋವಿಡ್ ಟೆಸ್ಟ್ ಗೆ ಹೆದರಿ ರಸ್ತೆಗೆ ಇಳಿಯಲು ಹಿಂದೇಟು ಹಾಕುತಿದ್ದಾರೆ.

ಈಗಾಗಲೇ ಜಿಲ್ಲೆಯಾದ್ಯಂತ ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರ ಬಾರದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿಸದ್ದರೂ ಕೆಲವರು ಕುಂಟುನೆಪ ಹೇಳಿ ಬೈಕ್ ನಲ್ಲಿ ಅನಾವಶ್ಯಕವಾಗಿ ಓಡಾಟ ಮಾಡುವವರನ್ನು  ತಡೆದು ಅವರನ್ನು ಕೋವಿಡ್ RTPCR  ಟೆಷ್ಟಗೆ ಒಳಪಡಿಸಲಾಯಿತು. ಕಾನಾಹೊಸಹಳ್ಳಿ ಪಟ್ಟಣ ಉಜ್ಜಯಿನಿ ರಸ್ತೆಯಲ್ಲಿ ಗುರುವಾರ ಕಾನಾಹೊಸಹಳ್ಳಿ ಯ ಆಸ್ಪತ್ರೆ ಯ.   ರವರು ಹಾಗೂ ಕಾನಾಹೊಸಹಳ್ಳಿ ಪೊಲೀಸರು ಸೇರಿ  ಈ ವಿನೂತನ ಪ್ರಯತ್ನ ಮಾಡಿದರು, ಕೆಲ ಬೈಕ್ ಸವಾರರು ಉತ್ಸುಕರಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೆ ಮತ್ತೆ ಕೆಲವರು ಸರ್ ನಮ್ಮನ್ನು ಬಿಟ್ಟುಬಿಡಿ ಮತ್ತೊಮ್ಮೆ  ಹೊರಗಡೆ ಓಡಾಡುವುದಿಲ್ಲ ಎಂದು ಗೋಗರಿದರು, ಮತ್ತೆ ಕೆಲವರು ಆಸ್ಪತ್ರೆಗೆ ಬಂದಿದ್ದೇವೆ ಬಿಟ್ಟುಬಿಡಿ ಸರ್ ಎಂದು ಅಂಗಲಾಚಿದರು. ಇದೇ ಸಂದರ್ಭದಲ್ಲಿ ಕಾನಾಹೊಸಹಳ್ಳಿ ಪಿಎಸೈ ತಿಮ್ಮಣ್ಣ ಚಾಮನೂರು  ಪೊಲೀಸರಾದ ,ಕಲ್ಲೇಶ್, ಬೋಜನಾಯ್ಕ, ಹರ್ಷಿಯಾದ್,  ಆರೋಗ್ಯ ಇಲಾಖೆಯ ಸಿಬ್ಬಂದಿ ಗಳಾದ.ಸೋಮಶೇಖರ್, ಕೃಷ್ಣ ಹಾಗೂ ಗೃಹರಕ್ಷಕ ದಳದ ಚಂದ್ರಶೇಖರ್ ಮುಂತಾದವರು ಸಾತ್ ನೀಡಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply