ಬಳ್ಳಾರಿ- ಕೋವಿಡ್ ‌ವ್ಯಾಕ್ಸಿನೇಷನ್ ಡ್ರೈರನ್ ಜ.8ರಂದು  ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನಡೆಯಲಿದೆ. ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್), ಜಿಲ್ಲಾ ಆಸ್ಪತ್ರೆ, ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆ, ಮೋಕಾ ಸಮುದಾಯ ಆರೋಗ್ಯ ಕೇಂದ್ರ, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರ, ಚೆಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ,ಜಿಂದಾಲ್ ಸಂಜೀವಿನಿ ಆಸ್ಪತ್ರೆ, ಹೊಸಪೇಟೆಯಲ್ಲಿರುವ ಪಿಎಂಎಇ ಆಯುರ್ವೇದಿಕ್ ಮೇಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಲಸಿಕಾ ಡ್ರೈ ರನ್ ನಡೆಯಲಿದೆ.

ಈ ಡ್ರೈ ರನ್ ಗಾಗಿ ಪ್ರತಿ ಆಸ್ಪತ್ರೆಗಳಲ್ಲಿ 25ಜನರನ್ನು ನೋಂದಣಿ ಮಾಡಲಾಗಿದ್ದು,ಅವರಿಗೆ ಡ್ರೈರನ್ ಅಡಿ ಕೋವಿಡ್ ವ್ಯಾಕ್ಸಿನೇಷನ್‌ ನೀಡಲಾಗುತ್ತದೆ. ಈ ಆಸ್ಪತ್ರೆಗಳಲ್ಲಿ ಬೆಳಗ್ಗೆ 9ರಿಂದ ಆರಂಭವಾಗಿ ಸಂಜೆ 5ರವರೆಗೆ ನಡೆಯಲಿದೆ ಎಂದು ಜಿಲ್ಲಾ ಆರ್ ಸಿ ಎಚ್ ಅಧಿಕಾರಿ‌ ಡಾ.ಅನಿಲಕುಮಾರ್ ತಿಳಿಸಿದ್ದಾರೆ.

About Author

Priya Bot

Leave A Reply