ಕೆಆರ್‌ಎಸ್ ಬೀರುಕು ವಿಚಾರ ಬಿಟ್ಟು ಈಗ ಬೇರೆ ರೀತಿಯ ಫೈಟಿಂಗ್ ಆರಂಭವಾಗಿದೆ- ಸಚಿವ ಜಗದೀಶ ಶೆಟ್ಟರ.

0

ಹುಬ್ಬಳ್ಳಿ-  ಸಂಸದರಾದ ಸುಮಲತಾ ಅಂಬರೀಶ್ ಅವರು ಈ ಹಿಂದೆ ಕೆಆರ್‌ಎಸ್ ಡ್ಯಾಮ್ ಬೀರುಕು ಬಿಟ್ಟ ವಿಚಾರ ಮಾತಾಡಿದರು, ಆದರೆ ಈಗ ಆ ವಿಚಾರ ಬಿಟ್ಟು, ಸುಮಲತಾ ಮತ್ತು ಹೆಚ್‌ಡಿಕೆಯವರ ನಡುವೆ ಮಾತಿನ ಫೈಟಿಂಗ್ ಶುರುವಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಹೇಳಿದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಕೂಡಾ ಸಂಸದರಾದ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಹೆಚ್ ಡಿ ಕೆ ಅವರ ನಡುವೆ ನಡೆಯುತ್ತಿರುವ ಮಾತಿನ ಸಮರವನ್ನು ಗಮನಿಸುತ್ತಿದ್ದೇನೆ, ಕಳೆದ ಎರಡು ಮೂರು ದಿನಗಳಿಂದ ಮುಂಜಾನೆಯಿಂದ ಸಂಜೆಯವರೆಗೆ ಸಿರಿಯಲ್ ಆಗಿ ಹೋಗಿದೆ. ಮಾಧ್ಯಮವುಗಳು ಆ ವಿಚಾರವನ್ನು ತೋರಿಸುವುದು ಕಡಿಮೆ ಮಾಡಿದಲ್ಲಿ, ಅದೂ ತಾನಾಗಿಯೇ ಕಡಿಮೆಯಾಗುತ್ತದೆ, ರಾಜ್ಯದಲ್ಲಿ ನೂರೆಂಟು ವಿಚಾರಗಳು ಇವೆ ಅವುಗಳ ಬಗ್ಗೆ ಮಾಧ್ಯಮಗಳು ಗಮನಹರಿಸಬೇಕು ಎಂದರು.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಸಫರ್ ಆಗುತ್ತಿದ್ದೇವೆ ಇನ್ನೂ ಕೂಡಾ ರಾಜ್ಯದಲ್ಲಿ ಕೊರೊನಾ 100ಪ್ರತಿಶತ ಕಡಿಮೆಯಾಗಿಲ್ಲಾ, ಇದರ ನಡುವೆ ಈಗ ಅಧಿವೇಶನ ನಡೆಸಬೇಕಾಗಿದೆ. ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕೋ ಅಥವಾ ಬೇಡಾ ಅನ್ನುವ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ, ಬೆಳಗಾವಿ ಅಥವಾ ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕು‌ ಎನ್ನುವುದರ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ಇನ್ನೂ ನಡೆದಿಲ್ಲಾ, ನಾಳೆ ಮುಖ್ಯಮಂತ್ರಿ ಭೇಟಿಯಾಗಿ ಇದರ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply