ಹುಬ್ಬಳ್ಳಿ-ಸಚಿವ ಸಂಪುಟ ಸದ್ಯದಲ್ಲಿಯೇ ವಿಸ್ತರಣೆ ಆಗಲಿದೆ ಎಂದು ಡಿಸಿಎಮ್ ಲಕ್ಷಣ ಸವದಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು , ಸಚಿವ ಸಂಪುಟ ರಚನೆಯ ಬಗ್ಗೆ ಸುಳಿವು ನೀಡಿದ್ದಾರೆ.  ಇನ್ನೂ ನಿನ್ನೆಯಷ್ಟೆ ಸಿ ಎಮ್ ಯಡಿಯೂರಪ್ಪ ನವರು ದೆಹಲಿಗೆ ಹೋಗಿ ಬಂದಿದ್ದಾರೆ. ಬಹಳ ದಿನಗಳಿಂದ ಸಂಪುಟ ವಿಸ್ತರಣೆಯ ಹಲವಾರು ಶಾಸಕರು ಕಾದು ಕುಳಿತಿದ್ದರು. ಇದನ್ನು ಅರಿತು ಕೇಂದ್ರ ಸರ್ಕಾರ ಈಗ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದೇ ತಿಂಗಳು 13 ಮತ್ತು 14 ರಂದು ಸಚಿವ ಸಂಪುಟ ರಚನೆಯಾಗಲಿದೆ. ಉಳಿದಿರುವುದು ಏಳು ಸ್ಥಾನಗಳು, ಏಳು ಜನರಿಗೆ ಮಾತ್ರ ಸಚಿವ ಸ್ಥಾನ ದೊರೆಯಲಿದೆ. ಯಾರಿಗೆ ಸಚಿವ ಸ್ಥಾನ ಸಿಗುತ್ತದೆ, ಯಾರಿಗೆ ಇಲ್ಲ  ಯಾರನ್ನು ಕೈ ಬೀಡುತ್ತಾರೆ ಎಂಬ ಮಾಹಿತಿ ನನಗೆ ತಿಳಿದಿಲ್ಲಾ ಎಂದಿದ್ದಾರೆ..

About Author

Priya Bot

Leave A Reply