ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಅದ್ಧೂರಿ ಚಾಲನೆ

0

ಬಳ್ಳಾರಿ – ಕಂಪ್ಲಿಕಂದಾಯ ಇಲಾಖೆ ಹಾಗೂ ಜಿಲ್ಲಾ ಖನಿಜ ನಿಧಿ ಯೋಜನೆಯಡಿ ಸೇರಿದಂತೆ ಒಟ್ಟು 15 ಕೋಟಿ ವೆಚ್ಚದಲ್ಲಿ ನಿರ್ಮಿಸಲಿರುವ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಇಂದು ಅದ್ಧೂರಿ ಚಾಲನೆ ದೊರೆಯಿತು.

ಇಲ್ಲಿನ ಉದ್ಭವ ಗಣೇಶ್ ದೇವಸ್ಥಾನ ಬಳಿಯಲ್ಲಿ ತಾಲೂಕು ಹೋರಾಟಗಾರರು, ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಶಾಸಕ ಜೆ.ಎನ್.ಗಣೇಶ್ ನೇತೃತ್ವದಲ್ಲಿ ಮೆರವಣಿಗೆ ಆರಂಭಿಸಿ, ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯ ರಸ್ತೆ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತದೊಂದಿಗೆ ಹೊಸಪೇಟೆ ಬೈಪಾಸ್ ರಸ್ತೆಯ ಮೂಲಕ ಯಲ್ಲಮ್ಮಕ್ಯಾಂಪ್ ಬಳಿಯ ಪಾಲಿಟೆಕ್ನಿಕ್ ಕಾಲೇಜು ಬಳಿಯ ಮುಖ್ಯರಸ್ತೆಯಲ್ಲಿರುವ ಮಿನಿ ವಿಧಾನಸೌಧದ ಜಾಗದಲ್ಲಿ ಸಮಾವೇಶಗೊಂಡ ನಂತರ ಶಾಸಕ ಗಣೇಶ್ ಅವರು ಮಿನಿ ವಿಧಾನಸೌಧ  ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಂತರ ಶಾಸಕ ಮಾತನಾಡಿ, ಕಂಪ್ಲಿ ಹೋರಾಟಗಾರರು ಪರಿಶ್ರಮದ ಹೋರಾಟಕ್ಕೆ ಕಂಪ್ಲಿ ತಾಲೂಕಾಗಿದೆ. ಅದರಂತೆಯೇ ಜನರ ಸಹಕಾರದೊಂದಿಗೆ ಕಂಪ್ಲಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಬೇಕೆಂಬ ಹಂಬಲದೊಂದಿಗೆ ಪ್ರತಿ ಕ್ಷಣಕ್ಷಣದ ಶ್ರಮದಿಂದ ಕಂದಾಯ ಇಲಾಖೆಯ 10 ಕೋಟಿ ಹಾಗೂ ಜಿಲ್ಲಾ ಖನಿಜಾ ನಿಧಿಯಿಂದ 5 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದರಿಂದ ಇವತ್ತು ಮಿನಿ ವಿಧಾನಸೌಧ ನಿರ್ಮಾಣದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ತಾಲೂಕು ಕೇಂದ್ರ ಆರಂಭಗೊಂಡು ಎರಡು ವರ್ಷ ಕಳೆದರೂ ಇನ್ನೂ ವಿವಿಧ ಇಲಾಖೆಗಳು ಕಂಪ್ಲಿಗೆ ಬಂದಿಲ್ಲ. ಆದ್ದರಿಂದ ಮಿನಿ ವಿಧಾನಸೌಧ ನಿರ್ಮಾಣವಾದರೆ, ಎಲ್ಲಾ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಕಾರ್ಯನಿರ್ವಹಿಸಲಿವೆ. ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿದ್ದಂತೆ ಇನ್ನಿತರ ಇಲಾಖೆಗಳು ಕಂಪ್ಲಿಗೆ ಬರಲಿದ್ದು, ಕಂಪ್ಲಿ ತಾಲೂಕಿನ ಜನರಿಗೆ ಇಲಾಖೆಯ ಯೋಜನೆಗಳು ಸಕಾಲದಲ್ಲಿ ದೊರಯಲಿವೆ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply