ಬಳ್ಳಾರಿ-ಬಳ್ಳಾರಿ ಜಿಲ್ಲೆಯ ಕುರುಗೋಡು ಸಮೀಪದ ಸಿರಿಗೇರಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ  ಗ್ರಾಮದ ಮುಖಂಡರು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗೆಡೆ ಕಾಗೇರಿ ಮತ್ತು ಖ್ಯಾತ ನಟಿ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷೆ ತಾರಾ ಅನುರಾಧ ಇವರಿಗೆ ಮನವಿ ಸಲ್ಲಿಸಿದರು.    ಸಿರಿಗೇರಿ  ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಿರಿಗೇರಿ ಅನ್ನಪೂರ್ಣ  ಕ್ರಿಯೇಶನ್ಸ್ ಹಮ್ಮಿಕೊಂದಿದ್ದ ಸಾಕ್ಷಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಶಾಸಕ ಎಂ. ಎಸ್. ಸೋಮಲಿಂಗಪ್ಪ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.   ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ  ಶ್ರೀಮತಿ ಎಸ್ಎಂ. ರತ್ನಮ್ಮ ಅಡಿವೆಯ್ಯ, ಶ್ರೀ ನಾಗನಾಥೇಶ್ವರ ಟ್ರಸ್ಟ್ ಅಧ್ಯಕ್ಷ ಮಹಾರುದ್ರ ಗೌಡ, ಗ್ರಾಮದ ಮುಖಂಡರಾದ ಜೆ. ಮಲ್ಲಿಕಾರ್ಜುನ ಗೌಡ,  ಎಸ್ಎಂ .ಅಡಿವೆಯ ಸ್ವಾಮಿ, ಎಪಿಎಂಸಿ ಅಧ್ಯಕ್ಷ ಹಾಗಲೂರು ಮಲ್ಲನಗೌಡ, ಗ್ರಾಮ6 ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ಅಮರೇಶ್ ಗೌಡ, ಗ್ರಾಮದ ಮುಖಂಡರಾದ  ಗೋಡೆ ಸಂಪತ್ ಕುಮಾರ್ ಗೌಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಬಿ. ಈರಯ್ಯ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಸ್ಎಂ. ನಾಗರಾಜಸ್ವಾಮಿ,  ಇದೆ ವೇಳೆ ಎನ್.  ವಿರುಪಾಕ್ಷಿ  ನಿಯೋಗ ಗ್ರಾಮದ ಪರವಾಗಿ ಮನವಿ ಸಲ್ಲಿಸಿದರು

Leave A Reply