ನವದೆಹಲಿ – ಸಾಮಾಜಿಕ ಚಾಲತಾ‌ಣದಲ್ಲಿ  ಜನರು ನೀಡುವ ಮಾಹಿತಿ ಸೋರಿಕೆ ಆಗುತ್ತೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿಬಂದಿದೆ. ಸಾಮಾಜಿಕ ಜಾಲತಾಣದ ಖಾತೆ ತೆರೆಯುವಾಗ ನೀಡಿರುವ ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಕೆಲ ಮಾಹಿತಿಗಳು ಸೋರಿಕೆಯಾಗಿವೆ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ.‌

ಸುಮಾರು 53.3 ಕೋಟಿ ಫೇಸ್ಬುಕ್ ಬಳಕೆದಾರರ ಗೌಪ್ಯ ಮಾಹಿತಿ ,  2019ರಲ್ಲಿ ಆನ್‌ಲೈನ್ ವೇದಿಕೆಯಲ್ಲಿ ಸೋರಿಕೆ ಮಾಡಲಾಗಿದೆ ಎಂದು ಸೈಬರ್ ಕ್ರೈಂ ತಜ್ಞರು ಹೇಳಿದ್ದಾರೆ ಎಂದು  ವರದಿಯಾಗಿದೆ. ಎಲ್ಲಾ 53.3 ಕೋಟಿ ಫೇಸ್‌ಬುಕ್ ಬಳಕೆದಾರರ ದತ್ತಾಂಶವನ್ನು ಸೋರಿಕೆ ಮಾಡಲಾಗಿತ್ತು ಎಂದು ‘ಹಡ್ಸನ್ ರಾಕ್ ಸೈಬರ್ ಕ್ರೈಮ್ ಇಂಟೆಲಿಜೆನ್ಸ್’ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಅಲನ್ ಗಾಲ್ ಶನಿವಾರ ಟ್ವೀಟ್ ಮಾಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply