ಮನ್ ಮುಲ್ ಹಾಲಿಗೆ ನೀರು ಪ್ರಕರಣ ಸಿ.ಬಿ.ಐ.ಗೆ ವಹಿಸಲಿ.ಮಾಜಿ ಸಚಿವ ಚಲುವರಾಯಸ್ವಾಮಿ

0

ಮಂಡ್ಯ – ಮಾಜಿ ಸಚಿವ ಚೆಲುವರಾಯಸ್ವಾಮಿ ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಂಡ್ಯ ಜಿಲ್ಲೆ ಮನ್ ಮುಲ್ ಡೈರಿ ಹಾಲಿಗೆ ನೀರು ಪ್ರಕರಣದಲ್ಲಿ ಮನ್ ಮುಲ್ ನಿರ್ದೇಶಕರುಗಳು ಪರಿಶುದ್ಧವಾಗಿ ಇದ್ದೇವೆ ನಾವು ಎಂದು ಹೇಳಿದ್ದಾರೆ ಹಾಗೂ ರಾಜಕೀಯ ಮುಖಂಡರುಗಳು ದಿನಕ್ಕೊಂದು ಹೇಳಿಕೆ ಕೊಡುತ್ತಾ ಬಂದಿದ್ದಾರೆ  ಎಲ್ಲರೂ ಕೂಡ ಪರಿಶುದ್ಧವಾಗಿರುವದು ಸತ್ಯವಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ತಿಳಿಸಿದರು

ಕರೋನ ಸಂದರ್ಭದಲ್ಲಿ ಸರ್ಕಾರವು ರೈತರಿಂದ ಪಡೆದ ರಾಗಿ ಹಣವನ್ನು ಇಲ್ಲಿಯವರೆಗೂ ಕೂಡ ಪಾವತಿಸಿಲ್ಲ ರೈತರ ಸಂಕಷ್ಟದಲ್ಲಿರುವ ಪರಿಸ್ಥಿತಿಯಲ್ಲಿ ತಕ್ಷಣ ರಾಗಿ ರಾಗಿ ಖರೀದಿ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು

ನಾಗಮಂಗಲ ತಾಲೂಕಿನ ಕೋಟೆಬೆಟ್ಟ ಕೋರೋನ ಸೋಂಕಿತರ ಕೇಂದ್ರದಲ್ಲಿ ಸಾಕಷ್ಟು ಅವ್ಯವಸ್ಥೆಗಳು ಇದ್ದು ಸೋಂಕಿತರನ್ನು ಸರಿಯಾದ ರೀತಿ ನೋಡಿಕೊಳ್ಳುತ್ತಿಲ್ಲ ಸ್ವಚ್ಛತೆ ಇಲ್ಲ ಎಂದು ದಿನನಿತ್ಯ ಆರೋಪಗಳು ಬರುತ್ತಿವೆ ತಾಲೂಕಾಡಳಿತ ಮತ್ತು ಜಿಲ್ಲಾಆಡಳಿತ ರೋಗಿಗಳನ್ನು ಸರಿಯಾದ ನೋಡಿಕೊಳ್ಳಬೇಕು ನೋಡಿಕೊಳ್ಳಲು ಹಾಗದ್ದಿದರೆ ಅವರನ್ನು ಮನೆಗೆ ಕಳಿಸಲು ಏಕೆ ವ್ಯವಸ್ಥೆ ಮಾಡಬಾರದು ಎಂದು ಪ್ರಶ್ನಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply