ಇಬ್ಬರೂ ಬಳಸುವ ಪದಗಳ ಮೇಲೆ ಹಿಡಿತವಿರಲಿ..!

0

ಮಂಡ್ಯ – ಸಂಸದೆ ಸುಮಲತಾ ಮತ್ತು ಕುಮಾರಸ್ವಾಮಿ ವಾಕ್ ಸಮರದ ವಿಚಾರ ಇಲ್ಲಿಗೆ ನಿಲ್ಲಿಸಿ ಎಂದು ಸಚಿವ ಕೆ ಎಸ್ ಈಶ್ವರಪ್ಪಾ ಅವರು ಮನವಿ ಮಾಡಿದ್ದಾರೆ. ಮಂಡ್ಯದಲ್ಲಿ ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಇಬ್ಬರೂ ಕೂಡ ಒಳ್ಳೆಯ ರಾಜಕಾರಣಿಗಳಿದ್ದಾರೆ. ಸಂಸದೆ ಸುಮಲತಾ ಹಾಗೂ ಕುಮಾರಸ್ವಾಮಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರು ಇದೆ. ಇವರ ಇಬ್ಬರ ಜಗಳದಲ್ಲಿ ಬಳಕೆ ಮಾಡುವ ಪದಗಳು ಸರಿಯಾಗಿಲ್ಲಾ. ಇವರಿಬ್ಬರೂ ಬಳಸುವ ಪದಗಳಿಂದ ಅವರು ಬಳಸುವಂತ ಭಾಷೆಗಳಿಂದ ಬಹಳ ಜನಕ್ಕೆ ನೋವಾಗ್ತಿದೆ.

ಇಬ್ಬರಿಗೂ ಪ್ರಾರ್ಥನೆ ಮಾಡ್ತೆನೆ ನೀವು ಬಳಸುವ ಭಾಷೆಯಲ್ಲಿ ಹಿಡಿತವಿರಲಿ ಎಂದಿದ್ದಾರೆ. ನಾನು ಇಬ್ಬರಲ್ಲಿಯೂ ನಾನು ಮನವಿ ಮಾಡುವೆ, ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದಿದ್ದಾರೆ. ನೀವು ಆರೋಪ ಪ್ರತ್ಯಾರೋಪ ಮಾಡುವಾಗ ಸಮಾಧಾನವಾಗಿ ಮಾತನಾಡಿ ಭಾಷೆಯಲ್ಲಿ ಹಿಡಿತವಿರಲಿ ಎಂದಿದ್ದಾರೆ. ಇನ್ನು ಕೆಆರ್ಎಸ್ ಬಗ್ಗೆ ರಾಜ್ಯ ಸರ್ಕಾರದ ಮಂತ್ರಿಗಳಿದ್ದಾರೆ ಕ್ರಮವಹಿಸುತ್ತಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply