ಮುಂಬೈ- ಕರೋನಾ ಕಾರಣದಿಂದಾಗಿ ಇಡೀ ಜಗತ್ತಿಗೆ ಕಂಟಕವಾಗಿತ್ತು. ಕಳೆದ ವರ್ಷ ಮಾರ್ಚ್ ನಿಂದ ದೇಶ ಲಾಕ್ ಡೌನ್ ಆಗಿತ್ತು. ಎಲ್ಲ ರೀತಿಯ ಉದ್ಯಮಗಳ ಮೇಲೆ ಪರಿಣಾಮ ಬೀರಿತ್ತು. ಸಂಚಾರ, ಜನ ದಟ್ಟಣೆ ಎಲ್ಲದಕ್ಕೂ ಬ್ರೇಕ್ ಹಾಕಲಾಗಿತ್ತು. ಇದೀಗ್ ಮುಂಬೈ ಸ್ಥಳೀಯ ರೈಲುಗಳ ಆರಂಭಕ್ಕೆ ಮಹಾರಾಷ್ಡ್ರ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ ಎಂದು ಮಾಹಿತಿ ಹೊರ ಬಿದ್ದಿದೆ.

ಮಹಾರಾಷ್ಡ್ರ ಸರ್ಕಾರ ರೈಲುಗಳ ಸಂಚಾರಕ್ಕೆ ಅನುಮತಿಯನ್ನು ನೀಡಿದೆ. ಆದರೆ ಇದರ ನಿರ್ಧಾರವನ್ನು ಪಶ್ಚಿಮ ರೈಲ್ವೆ ಇಲಾಖೆಗೆ ಬೀಡಲಾಗಿದೆ. ಎಂದು ಮಾಹಿತಿ ನೀಡಿದ್ದಾರೆ. ಸ್ಥಳೀಯ ರೈಲುಗಳ ಸಂಚಾರದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ದೊರೆತಂತಾಗುತ್ತದೆ. ಇದರಿಂದ ಸಾರ್ವಜನಿಕರ ಸಮಯ ಉಳಿತಾಯವಾಗುತ್ತದೆ. ಸೇರಬೇಕಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಸೇರುವಲ್ಲಿ ಉಪಯೋಗವಾಗುತ್ತದೆ. ಇನ್ನು ರೈಲುಗಳ ಸಂಚಾರಕ್ಕೆ ಸಮಯವನ್ನು ನಿಗದಿ ಮಾಡಲಾಗಿದೆ.  ಬೆಳಿಗ್ಗೆ 7 ರಿಂದ ಮದ್ಯಾಹ್ನ 12  ಗಂಟೆವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರಕಿದೆ.

About Author

Priya Bot

Leave A Reply