ಹೊಸಪೇಟೆ- ನಗರದಲ್ಲಿ ಇಂದು ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಗೆ ಬೆಂಬಲಿಸಿ ಪತ್ರ ಚಳುವಳಿ ಹಾಗೂ ಸಹಿ ಸಂಗ್ರಹ ಅಭಿಯಾನ ಮಾಡಲಾಯಿತು ಈ ಸಂದರ್ಭದಲ್ಲಿ ಹಲವಾರು ಹಿರಿಯ ಹೋರಾಟಗಾರರು, ನಾಗರೀಕರು, ಸಂಘ ಸಂಸ್ಥೆಗಳ ಮುಖಂಡರು, ವಿಜಯನಗರ ಜಿಲ್ಲೆ ರಚನೆ ಮಾಡಿ ಅಂತಿಮ ಅಧಿಸೂಚನೆ ಮಾಡಲು ಸರಕಾರವನ್ನು ಓತ್ತಾಯಿಸಿ ನೂತನ ವಿಜಯನಗರ ಜಿಲ್ಲೆಗೆ ಬೆಂಬಲಿಸಿ ಪತ್ರ ಚಳುವಳಿ ಹಾಗೂ ಬೃಹತ್ ಸಹಿ ಸಂಗ್ರಹ ಮಾಡಿದರು ಈ ಸಂದರ್ಭದಲ್ಲಿ ಸಂಚಾಲಕರಾದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಅರ್ಯ ವೈಶ್ಯ ಸಮಾದ ರಾಜ್ಯ ಸಮಿತಿ ಕಾರ್ಯದರ್ಶಿ ದೂಡ್ಡಮನಿ ಪಾಂಡುರಂಗ ಶೆಟ್ಟಿ, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗುಜ್ಜಲ ಶಿವರಾಮಪ್ಪ, ಹೊಸಪೇಟೆ ತಾಲೂಕು ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಸಿ.ವೀರಸ್ವಾಮಿ, ಆಂಜುಮನ್ ಸಮಿತಿ ಅಧ್ಯಕ್ಷ ಸೈಯದ್ ಖದೀರ್ ರಫೈಯ್, ಭ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.

suddinow.com
suddinow.com