ಅಗತ್ಯ ವಸ್ತುಗಳ ಖರೀದಿಗೆ ಲಾಕ್ ಡೌನ್ ಸಡಿಲಿಕೆ.

0

ರಾಯಚೂರು – ರಾಯಚೂರು ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ಸಡಿಲಗೊಳಿಸಿ ಇಂದು ಸಾರ್ವಜನಿಕರಿಗೆ ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಟ್ಟಿತ್ತು. ಮೂರು ದಿನಗಳಿಗೆ ಒಮ್ಮೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಲಾಕ್ ಡೌನ್ ಸಡಿಲಗೊಳಿಸಿ ತರಕಾರಿ, ದಿನಸಿ, ಮಾಂಸ, ಹೂ-ಹಣ್ಣು, ಮದ್ಯ, ಕೃಷಿ ಚಟುವಟಿಕೆಗಳಿಗೆ ರೈತರಿಗೆ ಕೃಷಿ ಸಲಕರಣೆಗಳಕೊಳ್ಳಲು ಖರೀದಿಸಲು ಅನುಮತಿ ನೀಡಲಾಯಿತು. ಹೀಗಾಗಿ ಜನರು ಮನೆಯಿಂದ ಹೊರಗಡೆ ತಮ್ಮಗೆ ಬೇಕಾದ ವಸ್ತುಗಳನ್ನ ಖರೀದಿಸುವ ವಸ್ತುಗಳ ಖರೀದಿಸುತ್ತಿದ್ದರು. ಇತ್ತ ಲಾಕ್ ಡೌನ್ ನಿಂದಾಗಿ ವ್ಯಾಪಾರಯಿಲ್ಲದೆ ಅಂಗಡಿಯನ್ನ ಬಂದ್ ಮಾಡಿದ್ದ ವ್ಯಾಪಾರಸ್ಥರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ರು.

ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಆರಂಭದಲ್ಲಿ ದಿನೆ ದಿನೇ ಹೆಚ್ಚಳವಾಗುತ್ತಿತ್ತು. ಆದ್ರೆ ಕಠಿಣ ಲಾಕ್ ಡೌನ್ ಜಾರಿ ಬಳಿಕ ಹಂತ ಹಂತವಾಗಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಜನರಿಗೆ ಅಗತ್ಯ ವಸ್ತುಗಳನ್ನ ಕೊಳ್ಳಲು ಹೊರಗಡೆ ಬಂದಾಗ ವಸ್ತುಗಳ ಖರೀದಿಸಲು ಅಂಗಡಿಗಳಿಗೆ ಮುಗಿ ಬಿಳಿತ್ತಿದ್ದು, ಕೋವಿಡ್-19 ನಿಯಮಗಳನ್ನ ಪಾಲಿಸುವುದು ಕಡ್ಡಾಯವಾಗಿದ್ದು, ಇದನ್ನ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ರು ಹೈರಾಣು ಆಗುತ್ತಿದ್ದರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply