ಪ್ಯಾರಿಸ್​-  ಕಳೆದ ಒಂದು ವರ್ಷಗಳಿಂದ ಈಡಿ ವಿಶ್ವವನ್ನು ಕಾಡುತ್ತಿರುವ ಮಹಾ ಮಾರಿ ಕರೋನಾ ಈಗ ತನ್ನ ಎರಡನೇ ರೂಪದಲ್ಲಿ ಮತ್ತೆ ಬಹುತೇಕ ದೇಶಗಳಲ್ಲಿ ಲಗ್ಗೆ ಇಟ್ಟಿದೆ. ಒಂದು ಸಾರಿ ಲಾಕ್​ಡೌನ್​ ಮಾಡಿ, ಕಂಗಾಲಾಗಿದ್ದ ದೇಶಗಳು ಇದೀಗ ಎರಡನೇ ಬಾರಿಗೆ ಲಾಕ್​ಡೌನ್​ ಆಗಿವೆ. ಪಾಶ್ಚಿಮಾತ್ಯ ದೇಶಗಳಲ್ಲಿ ರೂಪಾಂತರಿ ಕರೋನಾ ಹಾವಳಿ ಹೆಚ್ಚಾಗಿದ್ದು, ಫ್ರಾನ್ಸ್​ನಲ್ಲಿ ರೂಪಾಂತರಿ ಕರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಬೇರಾವುದನ್ನೂ ತೆರೆಯುವುದಕ್ಕೆ ಅವಕಾಶವಿಲ್ಲ. ಎಲ್ಲ ಕಚೇರಿಗಳನ್ನೂ 6 ಗಂಟೆಯೊಳಗೆ ಮುಚ್ಚಬೇಕು ಎಂದು ಫ್ರಾನ್ಸ್​ ಸರ್ಕಾರ ಆದೇಶಿಸಿದೆ ಮಾಡಿದೆ. ಅಲ್ಲದೇ ವಿದೇಶಿ ಪ್ರವಾಸಿಗರು ಹಾಗೂ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರಿಗೆ ಕಠಿಣ ಕ್ರಮ ಕೈಗೊಂಡಿದ್ದು, ಬೇರೆ ದೇಶಗಳಿಂದ ಫ್ರಾನ್ಸ್​ಗೆ ಬರುವವರು ಕರೊನಾ ನೆಗೆಟಿವ್​ ವರದಿ ತರುವುದು ಕಡ್ಡಾಯ ಮಾಡಿದೆ. ಕರೋನಾ ನೆಗೆಟಿವ್ ವರದಿ ಇದ್ದರೂ  ಒಂದು ವಾರದ ಕ್ವಾರಂಟೈನ್​ಗೆ ಒಳಗಾಗಲೇಬೇಕು ಎನ್ನುವ ನಿಯಮ ಜಾರಿಗೊಳಿಸಲಾಗಿದೆ….

About Author

Priya Bot

Leave A Reply