ನಂಬಿ ಕರೆದರೆ ಓ ಎನ್ನನೇ ಶಿವನು

0

ಡಾ. ಈಶ್ವರಾನಂದ ಸ್ವಾಮೀಜಿ

ನಾನು ಇತ್ತಿಚೆಗೆ ಒಬ್ಬರ ಮನೆಗೆ ಹೋಗಿದ್ದಾಗ, ಮನೆಯ ಯಜಮಾನ ದೇವರ ಪೂಜೆ ಮಾಡುತಿದ್ದ. ಅವನು “ಗುರು ಬ್ರಹ್ಮ ಗುರು ವಿಷ್ಣು…… ಏನೆ, ಆಫಿಸ್ ಟೈಮ್ ಆಯ್ತು ಬೇಗ ನಾಸ್ಟಾ ಮಾಡು. ಗುರುದೇವೋ ಮಹೇಶ್ವರ ಗುರು ಸಾಕ್ಷಾತ್…….. ಶಾಮ ಎದ್ದಾನೊ ಇಲ್ಲೊ ಸ್ಕೂಲ್ ಟೈಮ್ ಆಯ್ತು ಎಬ್ಬಿಸು. ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ” ಇದು ತಮಾಷೆಗೆ ಹೇಳುತಿಲ್ಲ. ಇದು ಪ್ರತಿಯೊಬ್ಬರ ಮನೆಯಲ್ಲೂ ನಡೆಯುತ್ತದೆ. ದೇವರ ಪೂಜೆ ಪ್ರಾರ್ಥನೆ ಎನ್ನುವುದು ಕೆವಲ ಕಾಟಾಚಾಕ್ಕಾಗಿ ಇರಬಾರದು. ಇಗಂತೂ ಪ್ರಾರ್ಥನೆ, ದೀಪ ಬೆಳಗುವುದು, ದೈವರಾಧನೆಯಲ್ಲಿ ತೊಡಗುವುದು, ಮೊದಲಾದ ದೈವಿಕ ಕಾರ್ಯಗಳೆಲ್ಲ ಅರ್ಥವನ್ನು ಕಳೆದುಕೊಂಡು ಬರೀ ಸಂಪ್ರದಾಯ ಮಾತ್ರ ಉಳಿದುಕೊಂಡಿದೆ. ಅನೇಕರು ಅದರ ಪಾಲನೆ ಮಾತ್ರ ಮಾಡುತ್ತ ಬರುತ್ತಾರೆ. ಅಂತವರನ್ನು ಕಂಡು ಬಸವಣ್ಣನವರು “ನಂಬಿ ಕರೆದೊಡೆ ಓ ಎನ್ನನೇ ಶಿವನು” ಎಂದು ನುಡಿದಿದ್ದಾರೆ.

ನಂಬರು ನೆಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು
ನಂಬಿ ಕರೆದೊಡೆ ಓ ಎನ್ನನೇ ಶಿವನು
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬು ಮೆಟ್ಟಿ ಕೂಗೆಂದ ಕೂಡಲ ಸಂಗಮದೇವ.

ಒಮ್ಮೆ ಓರ್ವ ವ್ಯಕ್ತಿ ಪರ ಊರಿಗೆ ಹೋಗುತಿದ್ದ, ದಾರಿಯಲ್ಲಿ ಅವನಿಗೆ ತೃಷೆಯಾಯಿತು. ನೀರಿಗಾಗಿ ಎಲ್ಲಲ್ಲಿಯೂ ಹುಡುಕಿದ ಕೊನೆಗೆ ಒಂದು ಬಾವಿ ಸಿಕ್ಕಿತು. ನೀರು ಕುಡಿಯಲು ಬಾವಿಗೆ ಇಳಿಯುವನು. ನೀರು ಕುಡಿದು ಮೇಲ್ಹತ್ತುವಾಗ ಕಾಲು ಜಾರಿ ಬಿದ್ದನು. ಅವನಿಗೆ ಪೆಟ್ಟಾದುದರಿಂದ ಎಳಲಾಗಲಿಲ್ಲ. ಸ್ವಲ್ಪ್ಹೊತ್ತು ಅಲ್ಲಿಯೇ ಶಿವ ಧ್ಯಾನ ಮಾಡುತ ಕುಳಿತನು. ಆಗ ಬಾವಿಯ ಹತ್ತಿರ ಓರ್ವ ವೃದ್ಧ ಹೋಗುತಿರುವುದನ್ನು ಗಮನಿಸಿದ ಈ ವ್ಯಕ್ತಿ ಯಾರಾದರು ಕಾಪಾಡಿ, ನನ್ನನ್ನು ಮೇಲೆತ್ತಿ ಎಂದು ಕೂಗಿದ. ಆಗ ಆ ವೃದ್ಧ ಬಾವಿಬಿದ್ದ ವ್ಯಕ್ತಿಯನ್ನು ತನ್ನ ತಲೆಗೆ ಸುತ್ತಿದ ರೂಮಾಲನ್ನು ಇಳಿಬಿಟ್ಟು ಮೇಲೆತ್ತಿದನು.

ಹಾಗೆಯೇ ಮಾನವ ಜೀವಿಯು ಈ ಸಂಸಾರ ಎಂಬ ಬಾವಿಯಲ್ಲಿ ಬಿದ್ದಾಗ ಈಶ್ವರನೆಂಬ ವೃದ್ಧ ಬಂದು ಜ್ಞಾನವೆಂಬ ರೂಮಾಲಿನಿಂದ ಮುಕ್ತಿ ಎಂಬ ಮೇಲ್ಭಾಗಕ್ಕೆ ಎತ್ತುವನು. ಆದುದರಿಂದ ನಾವು ಯಾವಾಗಲೂ ದೇವರನ್ನು ನಂಬಿ ಕರೆದರೆ ಸಾಕು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply