ಶಿವಮೊಗ್ಗ- ಮಾಜಿ ಶಾಸಕ ಮುಧ ಬಂಗಾರಪ್ಪಾ ಅವರು ತೆನೆ ಕೆಳಗಿಳಿಸಿ ಕೈ ಹಿಡಿಯಲಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಾನು ರಾಜಕಾರಣದಿಂದ ದೂರ ಇದ್ದು. ಖಾಲಿ ಕುಳಿತುಕೊಂಡು ನನಗು ಅಭ್ಯಾಸ ಇಲ್ಲ. ಇಂದು ನನ್ನ ಜನ್ಮ ದಿನವಿದ್ದು, ಈ ಜನ್ಮ ದಿನ‌ ನನ್ನ ಬದಲಾವಣೆಗೆ ಕಾರಣವಾಗಲಿದೆ. ಆದಷ್ಟು ಬೇಗ ಬದಲಾವಣೆಯ ನಿರ್ಧಾರ ಕೈಗೊಳ್ಳುತ್ತೇನೆ  ಎನ್ನುವ ಮೂಲಕ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸುಳಿವು ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೀವನದಲ್ಲಿ ಬದಲಾವಣೆ ಎಂಬುದು ಅನಿವಾರ್ಯ, ನನ್ನ ಜೊತೆಯಲ್ಲಿ ಇರುವ ಜನರಿಗೆ ನನ್ನ ಬದಲಾವಣೆಯಿಂದ ಒಳ್ಳೆಯದು ಆಗಲಿದೆ, ಹೀಗಾಗ ನನ್ನ ಬದಲಾವಣೆಯ ನಿರ್ಧಾರ ಭವಿಷ್ಯದಲ್ಲಿ ಅನುಕೂಲ ಆಗಲಿದೆ ಎಂದಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ನನನ್ನು ಚೆನ್ನಾಗಿಯೇ ನೋಡಿಕೊಂಡಿದೆ. ಆದ್ರೆ ಪಕ್ಷದಲ್ಲಿ ತುಡಿದ ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳುವಿದಿಲ್ಲಾ ಹೀಗಾಗಿ ನಾ ಈ ನಿರ್ಧಾರಕ್ಕೆ ಬಂದಿರುವೆ. ಈ ವಿಷಯ ನಾನು ಹಿರಿಯರ ಗಮನಕ್ಕೆ ತಂದಿರುವೆ ಎಂದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply