ಮರದಲ್ಲಿ ಒಂದು ಕಾಗೆ ಇತ್ತು ಅದರ ಪುಟ್ಟ ಮರಿ ಇದೀಗ ಕಣ್ಣು ಬಿಟ್ಟಿತ್ತು. ಅದೇ ರೀತಿ ಮರದಲ್ಲಿ ಹಲವು ಬಣ್ಣ ಬಣ್ಣದ ಪಕ್ಷಿಗಳು ಹಾಡಿ ಕುಣಿಯುತ್ತಿದ್ದವು. ಅದನ್ನೆಲ್ಲ ಕಂಡ ಮರಿಗೆ ಆಶ್ಚರ್ಯ, ಆನಂದ! ಸ್ವಲ್ಪ ಸಮಯದ ನಂತರ ತಾಯಿಯ ದೇಹವನ್ನು ತನ್ನ ದೇಹವನ್ನು ನೋಡಿತು. ಬರೀ ಕಪ್ಪು. ಮರಿಗೆ ಸಹನೆಯಾಗಲಿಲ್ಲ. ತಾಯಿಗೆ ಕೇಳಿತು, “ಅಮ್ಮಾ ಉಳಿದೆಲ್ಲ ಪಕ್ಷಿಗಳಿಗೆ ಎಂಥ ಮನೋಹರ ಬಣ್ಣ! ನಮಗೇಕೆ ಈ ಅಸಹ್ಯ ಕಪ್ಪು ಬಣ್ಣ?”  ತಾಯಿ ಹೇಳಿದಳು, “ಬಣ್ಣಕ್ಕಿಂತ ಬದುಕು ಮಹತ್ವದ್ದು!”  ಅದು ಹೇಗೆ?” ಮರಿ ಮತ್ತೆ ಕೇಳಿತು. ತಾಯಿ ಹೇಳಿದಳು, ‘ಬದುಕಿಗೆ ಬಣ್ಣವಿದೆ ವಿನಾ ಬಣ್ಣಕ್ಕೆ ಬದುಕಿಲ್ಲ’ ಕೋಗಿಲೆ ಹಾಡುತ್ತದೆ. ನವಿಲು ಕುಣಿಯುತ್ತದೆ. ಗಿಳಿ ಸವಿ ನುಡಿಯುತ್ತದೆ. ಮೊಲ ಓಡುತ್ತದೆ. ಬದುಕು ಇದ್ದರೆ ತಾನೇ ಈ ಹಾಡು, ಕುಣಿತ ಎಲ್ಲಾ! ಆದ್ದರಿಂದ ಬದುಕು ಮಹತ್ವದ್ದೇ ವಿನಾ ಬಣ್ಣವಲ್ಲ!” ತಾಯಿಯ ಮಾತನ್ನು ಕೇಳಿದ ಮರಿಗೆ ಸಂತಸವೇ ಸಂತಸ. ಈಗ ಮರಿಗೆ ಬದುಕಿನ ಭವ್ಯತೆಯ ಅರಿವಾಗಿತ್ತು!.

ಸಂಗ್ರಹ- ಡಾ.ಈಶ್ವರಾನಂದ ಸ್ವಾಮೀಜಿ.

Leave A Reply