ಬಾಗಲಕೋಟೆ-  ಪಂಚಮಸಾಲಿ ಮೀಸಲಾತಿ ವಿವಾದ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತಿಲ್ಲಾ. ಪಂಚಮಸಾಲಿಯನ್ನು 2 ಎ ಗೆ ಸೇರಿಸುವಂತೆ ಬಹುದಿನಗಳ ಬೇಡಿಕೆ ತಾರಕಕ್ಕೆ ಏರುವ ಲಕ್ಷಣ ಕಾಣುತ್ತಿದ್ದೆ‌ ಪಂಚಮಸಾಲಿ ಸಮುದಾಯಕ್ಕೆ ಎರಡು ದಿನಗಳಲ್ಲಿ ಮೀಸಲಾತಿ ನೀಡಿ ಇಲ್ಲವಾದರೆ ಪಾದಯಾತ್ರೆ ಮಾಡಲಾಗುವುದು ಎಂದು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿಗೆ ಗಡುವು ನೀಡಿದ್ದಾರೆ. ಬಾಗಲಕೋಟೆಯ ಹುನಗುಂದದಲ್ಲಿ  ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ,  ಮುಖ್ಯಮಂತ್ರಿಗೆ ಗಡುವು ನೀಡಿದ್ದಾರೆ. ‌ ಪಂಚಮಸಾಲಿ 2 ಎ ಮೀಸಲಾತಿ ಪಾದಯಾತ್ರೆ ಹೋರಾಟ ವಿಚಾರ ಕುರಿತಂತೆ ಸರ್ಕಾರಕ್ಕೆ ಇನ್ನೆರಡು ದಿನಗಳ ಗಡುವು ನೀಡಿದರು ಸ್ವಾಮೀಜಿ. ಎರಡು ದಿನದಲ್ಲಿ ಸಿಎಂ ಯಡಿಯೂರಪ್ಪ ತಮ್ಮ ನಿಲುವು ತಿಳಿಸಿ ಸ್ಪಂದಿಸಿದಿದ್ದರೆ ಪಾದಯಾತ್ರೆ ಅಚಲ. ಸರ್ಕಾರ ಸ್ಪಂದಿಸಿದರೆ ಅಭಿನಂದಿಸಿ ವಿಜಯೋತ್ಸವ ಮಾಡುತ್ತೇವೆ. ಸ್ಪಂದನೆ ಇರದಿದ್ದರೆ ಕೂಡಲಸಂಗಮದಿಂದ ಜನೇವರಿ 14 ರಿಂದ ಬೃಹತ್ ಪಾದಯಾತ್ರೆ ಮಾಡುತ್ತೇವೆ ಎಂದರು. ಇನ್ನೂ ಕೂಡಲಸಂಗಮದಿಂದ ಇಲಕಲ್, ಕೊಪ್ಪಳ, ಹರಪ್ಪನಹಳ್ಳಿ, ದಾವಣಗೆರೆ, ಚಿತ್ರದುಗ೯, ತುಮಕೂರು ಮಾಗ೯ವಾಗಿ ಬೆಂಗಳೂರಿಗೆ ಪಾದಯಾತ್ರೆಯನ್ನು ಮಾಡಲಾಗುತ್ತದೆ. ಅಧಿವೇಶನ ನಡೆಯುವ ವೇಳೆ ಬೆಂಗಳೂರು ತಲುಪಿ ವಿಧಾನಸೌಧ ಮುತ್ತಿಗೆಗೆ ಹಾಕುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

About Author

Priya Bot

Leave A Reply