ರಾಮನಗರ-  2006 ರಲ್ಲಿ ಬಿಜೆಪಿ ಗೆ ಜೀವ ಕೊಟ್ಟಿದ್ದೇ ನಾನು ಇದೇ ಯಡಿಯೂರಪ್ಪ ಅವರು, 2006 ರಲ್ಲಿ  ನನ್ನ ಬಳಿ ಬಂದು ನನನ್ನು ಮಂತ್ರಿ ಮಾಡಿ, ನಾನು ಈಗಲೇ ಬಿಜೆಪಿಗೆ ರಾಜೀನಾಮೆ ನೀಡುವೆ ಎಂದು ಬಂದಿದ್ದರು ಎಂದು ಮಾಜಿ‌ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ.

ರಾಮನಗದಲ್ಲಿ ಇಂದು ಮಾತನಾಡಿದ ಅವರು, ರಾಮನಗರದಿಂದ ನನನ್ನು ಕಾಲಿ ಮಾಡಿಸಲು ಕೆಲವರು ಹೊಂಚು ಹಾಕಿದ್ದಾರೆ, ಆದ್ರೆ ಅದು ಆಗಲ್ಲಾ, ನಾನು ನನ್ನ ಜನತೆಗೆ ಏನು ಮಾಡಿರುವೆ ಎಂಬುದು ಗೊತ್ತಿದೆ ಎಂದಿದ್ದಾರೆ. ಇನ್ನು ನಾನು ಈ ರಾಜ್ಯವನ್ನು ಕೊಳ್ಳೆ ಹೊಡೆದಿಲ್ಲಾ ಬಂಡೆ ಒಡೆದು ದುಡ್ಡು ಮಾಡಿಲ್ಲಾ , ನಾನು ರಾಮನಗರಕ್ಕೆ ಏನು ಮಾಡಿದ್ದೆನೆ ಎಂಬುದು ಇಲ್ಲಿನ ಜನತೆಗೆ ಗೊತ್ತಿದೆ, ರಾಮನಗರ ಯಾರು ಸ್ವತ್ತು ಅಲ್ಲಾ ಎಂದು ಕಿಡಿಕಾರಿದ್ದಾರೆ. ಇನ್ನು 2006 ರಲ್ಲಿ ಬಿ ಎಸ್ ವೈ ಅವರೇ ನನ್ನ ಬಳಿ ಬಂದು ನನನ್ನು ಮಂತ್ರಿ ಮಾಡಿ ನಾನು ಬೇಕಿದ್ರೆ ಬಿಜೆಪಿಗೆ ರಾಜೀನಾಮೆ ನೀಡುವೆ ಎಂದ ನನ್ನ ಬಳಿ ಬಂದಿದ್ದರು, ಅವರ ಎಲ್ಲಾ ವಿಷಯಗಳು ನನಗೆ ಗೊತ್ತು ಹೀಗಾಗಿ ನನಗೆ ಅವರಿ ಏನು ಮಾಡಲು ಸಾದ್ಯವಿಲ್ಲ ಎಂದು ಗುಡುಗಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply