ಮುಂಬೈ- ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸಿನಿಮಾ ತಾರೆಯರು ತಾವು ನಟಿಸಿದ ಸಿನಿಮಾದಿಂದ ಸುದ್ದಿಯಾಗುತ್ತಿಲ್ಲಾ ಬದಲಾಗಿ ಅವರ ವೈಯಕ್ತಿಕ ಬದುಕಿನಿಂದಲೇ ಹೆಚ್ಚು ಸುದ್ದಿಯಾಗುತಿದ್ದಾರೆ. ಹೌದು ಸದಾಕಾಲ ಸುದ್ದಿಯಲ್ಲಿ ಇರುವ ಮಲೈಕಾ ಅವರು ಈ ನಡುವಳಿಕೆ ಸಲ್ಮಾನ್ ಖಾನ್ ಮನೆಯಲ್ಲಿ ಒಡಕು ಮೂಡಿಸಿದೆ. ಹೌದು ಸಲ್ಮಾನ್ ಖಾನ್ ಸಹೋದರ ಅರ್ಬಜ್ ಖಾನ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಕಳೆದ 17 ಕ್ಕೂ ಹೆಚ್ಚು ವರ್ಷಗಳ ಕಾಲ  ಅವರ ಜೊತೆ ಸಂಸಾರ ಮಾಡಿದ್ದರು. ಆದ್ರೆ ಈಗ ದಿಢೀರನೆ ತಮ್ಮಗಿಂತ ಹತ್ತು ವರ್ಷಗಳ ಕಿರಿ ವಯಸ್ಸಿನ ಅರ್ಜುನ ಕಪೂರ್ ಜೊತೆಯಲ್ಲಿ ಡೇಟಿಂಗ್ ನಲ್ಲಿ ಇದ್ದಾರೆ. ಮೇಲಾಗಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ಇನ್ನು ತಮಗಿಂತ ಹತ್ತು ವರ್ಷದ ಕಿರಿಯ ವಯಸ್ಸಿನ ಯುವಕನ ಜೊತೆಯಲ್ಲಿ ಮೋಜು ಮಸ್ತಿ ಮಾಡುವ ಪೋಟೋ ಗಳನ್ನು ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದುಂಟು. ಒಟ್ಟಾರೆ ಮಲೈಕಾ ಅವರ ಈ ನಿಲುವು ಸಲ್ಮಾನ್ ಖಾನ್ ಅವರ ಮನೆಯಲ್ಲಿ ಒಂದು ರೀತಿಯಲ್ಲಿ ಬಿರುಕು ಮೂಡಿಸಿದೆ…

Leave A Reply