ಬೆಂಗಳೂರು – ಮಾಡರ್ನ್  ರೈತ ಎಂದೆ‌ ಫೇಮಸ್ ಆಗಿರುವ ಶಶಿ ಸಿಕ್ಸ್ ಪ್ಯಾಕ್ ಬಾಡಿ ಮಾಡಿಕೊಂಡು ರಗಡ್‌ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 6  ವಿನ್ನರ್ ಶಶಿ ಮಾಡರ್ನ್ ರೈತ ಅಂತಾನೇ ಫೇಮಸ್. ಬಿಗ್ ಬಾಸ್ ವಿನ್ನರ್ ಆದ ಮೇಲೆ ಸಾಮಾಜಿಕ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈಗ ಬಿಗ್‍ಬಾಸ್ ವಿನ್ನರ್ ಶಶಿ ಅವರ ಹೊಸ ಲುಕ್ ಔಟ್ ಆಗಿದೆ. ಹೊಸ ಸಿನಿಮಾಗಾಗಿ ಫುಲ್ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕನ್ನಡದ ಮೆಹಬೂಬಾ ಸಿನಿಮಾದಲ್ಲಿ ಮಾರ್ಡನ್ ರೈತ ಶಶಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಮತ್ತು ಸಾಹಸ ದೃಶ್ಯಗಳ ಶೂಟಂಗ್ ಬಾಕಿ ಇದೆ. ಫೈಟ್ ದೃಶ್ಯಗಳಿಗಾಗಿ ಶಶಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಕಟ್ಟುಮಸ್ತಾಗಿ ಮಿಂಚುತ್ತಿದ್ದಾರೆ…..

About Author

Priya Bot

1 Comment

Leave A Reply