ಮಾಸ್ಕ್  ವಿಚಾರವಾಗಿ ಯೋಧ ಹಾಗೂ ಪೊಲೀಸರ ನಡುವೇ ವಾಗ್ವಾದ.

0

ಹುಬ್ಬಳ್ಳಿ – ಕೊರೊನಾ ವೈರಸ್ ಹರಡದಂತೆ ಕೈಗೊಂಡಿರುವ ಲಾಕ್ ಡೌನ್ ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪೋಲಿಸರು ದಂಡವನ್ನು ಹಾಕುತ್ತಿದ್ದಾರೆ.  ನಗರದ ಚನ್ನಮ್ಮ ಸರ್ಕಲ್ ನಲ್ಲಿ ವಾಹನ ತಪಾಸಣೆ  ಮಾಡುತ್ತಿರುವ ವೇಳೆ ಸಿ ಆರ್ ಪಿ ಎಫ್ ಯೋಧನ ವಾಹನದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಸಂಚರಿಸುತ್ತಿದ್ದನ್ನು ಗಮನಿಸಿದ ಪೋಲಿಸರು ದಂಡ ಕಟ್ಟುವಂತೆ ಹೇಳಿದ್ದಾರೆ. ಯೋಧ ನಾವು ಮಾಸ್ಕ್ ಹಾಕಿಕೊಂಡಿದ್ದೇವೆ.  ನೀವು ಸುಳ್ಳು ಹೇಳುತ್ತಿದ್ದಿರಿ ಎಂದು ಪೊಲಿಸರ ಜೊತೆ ವಾಗ್ವಾದ ಕ್ಕೆ ಇಳಿದಿದ್ದಾನೆ.

ಹೀಗೆ ಮಾತಿಗೆ ಮಾತು ಬೆಳೆದಿದೆ. ವಾಹನವನ್ನು  ಸೀಜ್ ಮಾಡಲು ಇನ್ಸ್ ಪೆಕ್ಟರ್ ರವಿಚಂದ್ರರ ಕಾರನ್ನು ಸೀಜ್ ಮಾಡಲು ಹೋದಾಗ ಪೋಲಿಸರ್ ಜೊತೆ ಯೋಧ ಮಂಜುನಾಥ ನಾಯ್ಕ ವಾಗ್ವಾದ ನಡೆಸಿದ. ನೀವು ನನ್ನ ವಾಹನವನ್ನು ಸೀಜ್ ಮಾಡಲು ಬರುವುದಿಲ್ಲ. ನನ್ನ ಕಡೆ ವಾಹನದ ಎಲ್ಲ ಡ್ಯಾಕುಮೆಂಟ್ ಗಳಿವೆ. ಹೇಗೆ ಸೀಜ್ ಮಾಡುತ್ತಿರಿ ಮಾಡಿ ಅಂತ ಪೋಲಿಸರ ಜೊತೆ  ವಾದಕ್ಕೆ ಇಳಿದ.

ಕೊನೆಗೆ ನಮ್ಮ ಮನೆಯಲ್ಲಿರುವವರಿಗೆ  ಕೊರೊನಾ ಪಾಸಿಟಿವ್ ಆಗಿದೆ, ನಾನು ಅರ್ಜಂಟಾಗಿ ನಮ್ಮ ಊರು ಹುಲಕೊಟಿಗೆ ಹೋಗಬೆಕು ಎಂದು ರಿಕ್ವೆಸ್ಟ್ ಮಾಡಿಕೊಂಡ. ಮಾನವಿಯತೆ ದೃಷ್ಟಿಯಿಂದ ಮಾಸ್ಕ್ ಹಾಕಿಕೊಂಡಿಲ್ಲ ಅಂತ ಹೇಳಿ 250 ರೂಪಾಯಿ ದಂಡ ಕಟ್ಟಿಸಿಕೊಂಡು ವಾಹನ ಉಪನಗರ ಠಾಣೆ  ಪೊಲಿಸರು ಬಿಟ್ಟು ಕಳುಹಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply