ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೃಸರ್ ವಿತರಣೆ

0

ವಿಜಯಪುರ

ಶೈಕ್ಷಣಿಕ ಬದುಕಿನ ಮೊದಲ ಯುದ್ಧ  ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಗೆಲ್ಲೋದಕ್ಕೂ ತಾವೆಲ್ಲರೂ ಈಗಾಗಲೇ ಸನ್ನದ್ಧರಾಗಿದ್ದಿರಿ ಇದೇ ಜುಲೈ 19 ರಿಂದ 22 ರವರೆಗೆ ತಮ್ಮ ಪರೀಕ್ಷೆ ಅತ್ಯಂತ ಶಿಸ್ತುಬದ್ಧತೆ ಹಾಗೂ ಕೋವಿಡ್-19 ನಿಯಮಗಳನ್ನು ಅನುಸರಿಸಿ ಕಾಳಜಿ ಪೂರ್ವಕವಾಗಿ ನಡೆಯಬೇಕೇಂದು  ವಿಧಾನಪರಿಷತ್ ಸದಸ್ಯರಾದ ಶ್ರೀ ಹನುಮಂತ ನಿರಾಣಿ  ಅವರು ಹೇಳಿದರು.

ಇಂದು  ನಗರದ ಅಲ್ ಅಮಿನ್ ಆಸ್ಪತ್ರೆ ಎದುರಿಗೆ ಇರುವ, ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್) ಇಲ್ಲಿ ಅಧಿಕಾರಿ ,ಶಿಕ್ಷಕರೊಂದಿಗೆ ಮಾಸ್ಕ್ ಹಾಗೂ ಸ್ಯಾನಿಟೃಸರ್ ವಿತರಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳು ಇದೇ ಜುಲೈ 19 ರಿಂದ 22 ರವರೆಗೆ ಜಿಲ್ಲೆಯ ಒಟ್ಟು 188 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ  ಮುಖ್ಯ ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಹೆದರದೆ  ಧೈರ್ಯದಿಂದ ಈ ಪರೀಕ್ಷೆಗಳನ್ನು ಕರೋನಾ ಮಹಾಮಾರಿಯೊಂದಿಗೆ ಎದುರಿಸಿ ವಿಜಯಶಾಲಿಗಳಾಗಿರಿ ನೀಮೆಲ್ಲ ಗೆಲುವಿಗೆ ನಾವೆಲ್ಲರೂ ಬೆಂಬಲವಾಗಿದಿವಿ ಎಂದು ಅವರು ಹೇಳಿದರು.

ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ದೃಢ ನಿಲುವು ತಾಳಿದ್ದು ಸ್ವಾಗತಾರ್ಹ ಮತ್ತು ಶ್ಲಾಘನೀಯ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಇಡಿ ಇಲಾಖೆಯು ಅಧಿಕಾರಿವೃಂದ, ಪಾಲಕರು, ಸಂಘ-ಸಂಸ್ಥೆಗಳ ತಮ್ಮ ಬೆನ್ನೆಲುಬಿಗೆ ನಿಂತು ಈ ಕರೋನಾ ಮಹಾಮಾರಿಯ ಮಧ್ಯೆಯೂ ಈ ಪರೀಕ್ಷಾ ಯುದ್ದವನ್ನು ಗೆಲ್ಲಬೇಕೆಂಬ ಇಂಥದ್ದೊಂದು ಮಾದರಿಯ ಕ್ಷಣವನ್ನು ಕೂತುಹಲದಿಂದ ಗಮನಿಸುತ್ತಿದ್ದೆ.

 ಕರೋನಾ ಸಂದರ್ಭದಲ್ಲಿ ಬರೆಯದೇ ಪಾಸಾಗಿ ಜೀವನದುದ್ದಕ್ಕೂ ಸಂತ್ರಸ್ತರ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳದೆ ಕರೋನಾ ಎದುರಿಸಿ ಪರೀಕ್ಷೆ ಬರೆದು ವಾರಿಯರ್ಸ್ ಗಳಾಗಿ ತಲೆಯೆತ್ತಿ ನಡೆಯೋದು ಹೆಮ್ಮೆಲ್ಲಯವೆ? ಅಂತಹ ಹೆಮ್ಮೆಯ ಸುಪುತ್ರರಾದ ತಮಗೆಲ್ಲಾ  ತಮ್ಮ ಬೆಂಬಲಕ್ಕೆ ನಿಂತ ಅಧಿಕಾರಿವೃಂದಕ್ಕೂ, ಪಾಲಕರಿಗೆ, ಶುಭಾಶಯಗಳೊಂದಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು(ಆಡಳಿತ), ಎನ್.ವ್ಹಿ.ಹೊಸೂರ, ಶ್ರೀ.ಎಸ್.ಪಿ‌.ಬಾಡಂಗಡಿ, ಶ್ರೀ.ಎಸ್.ಜೆ.ಹಂಚಿನಾಳ,ರವೀಂದ್ರ ತುಂಗಳ, ಭೀಮಾಶಂಕರ ಹಧನೂರು,ಮಾಳುಗೌಡ ಪಾಟೀಲ, ಗೋಪಾಲ ಘಟಕಾಂಬಳೆ,ರವಿ ಖಾನಾಪುರ,ವಿನಾಯಕ ದಹಿಂಡೆ, ಬಸವರಾಜ ಗೋಲಾಯಿ,ವಿಜಯ ಜೋಶಿ, ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply