ಶಿವಮೊಗ್ಗ-ಮೊದಮೊದಲು ಎಲ್ಲರು ಮಲೆನಾಡಿನಲ್ಲಿ ಭಾರಿ ಶಬ್ದ ಕೇಳಿಬಂದು ಭೂಮಿ ನಡುಗಿರುವ ಅನುಭವ ಉಂಟಾದ ಹಿನ್ನೆಲೆಯಲ್ಲಿ ಇದೊಂದು ಭೂಕಂಪ ಎಂದು ಭಾವಿಸಿದ್ದರು. ಆದ್ರೆ ಈಗ ಭಾರಿ ಶಬ್ದ ಕೇಳಿಬರಲು ಕಾರಣ ಏನು ಎನ್ನುವ ಮಾಹಿತಿ ಬಹಿರಂಗವಾಗಿದೆ. ಶಿವಮೊಗ್ಗ ಜನತೆಯನ್ನು ಬೆಚ್ಚಿಬೀಳಿಸಿದ್ದ ಬಾರೀ ಸದ್ದು ಈಗ ಭೂಕಂಪ ಎಂಬ ಮಾತಿನಿಂದ ತಿರುವು ಪಡೆದದ್ದು ಆ ಸದ್ದು ಭೂಕಂಪದ್ದಲ್ಲ, ಇದು ಜಿಲಿಟಿನ್ ಡೈನಾಮೆಟ್ ಸ್ಪೋಟದಿಂದ ಎಂಬುದು ಘಟನೆಯಿಂದ ಬಹಿರಂಗವಾಗಿದೆ.
ರೈಲ್ವೆ ಕ್ರಷರ್’ನಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಕನಿಷ್ಠ 15 ಜನ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ದೇಹಗಳು ಛಿದ್ರವಾಗಿವೆ. ಸಮೀಪದ ಹುಣಸೋಡು ಅಬ್ಬಲಗೆರೆ ನಡುವಿನ ಅಕ್ರಮ ಕ್ವಾರೆ ಬಳಿ ಬಾರೀ ಪ್ರಮಾಣದ ಡೈನಾಮೆಟ್ ಸಿಡಿದು ಬಿಹಾರಿ ಮೂಲದ ಕಾರ್ಮಿಕರು ಸಾವು ಕಂಡಿರುವ ಘಟನೆ ರಾತ್ರಿ ನಡೆದಿದೆ.
ರಾತ್ರಿ10.25_ರ ಹೊತ್ತಿಗೆ ಇಡೀ ಶಿವಮೊಗ್ಗ ಜನತೆಯನ್ನು ಬೆಚ್ಚಿಬೀಳಿಸಿದ್ದ ಬಾರೀ ಸದ್ದು ಈಗ ಭೂಕಂಪ ಎಂಬ ಮಾತಿನಿಂದ ತಿರುವು ಪಡೆದಿದೆ.