ಹುಬ್ಬಳ್ಳಿ: ಕೋವಿಡ್ ಮಹಾಮಾರಿ ದ್ವೀತಿಯ ಅಲೆಯಿಂದ ಸಂಪೂರ್ಣ ರಾಜ್ಯ ತತ್ತರಿಸಿ ಹೋಗಿದ್ದು, ರಾಜ್ಯದ ಜನತೆ ಭಯಬೀತಗೊಂಡಿದೆ. ಈಗ ಮತ್ತೊಮ್ಮೆ ಮಾಸ್ಕ್ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲಿಯೂ ವಿಶೇಷವಾಗಿ ಇಕೋ ಪ್ರೆಂಡ್ಲಿ ಮಾಸ್ಕಗಳಿಗೆ ಬೇಡಿಕೆ ಶುರುವಾಗಿದೆ.

ಹುಬ್ಬಳ್ಳಿಯ ಆರ್ ಕೆ ಖಾದಿ ಗ್ರಾಮದ್ಯೋಗ ಹಾಗೂ ಎಜ್ಯುಕೇಶನ್ ಸೊಸಾಯಿಟಿ ಕಳೆದ ವರ್ಷದಿಂದ ನಿರ್ಮಿಸಲು ಪ್ರಾರಂಭಿಸಿರುವ ಖಾದಿ ಬಟ್ಟೆಯ ಮಾಸ್ಕ್ ಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಅತ್ಯಂತ ಕೈಗೆಟುಕುವ ದರದಲ್ಲಿ ಅಂದರೇ ಕೇವಲ 10 ರೂಪಾಯಿಯಲ್ಲಿ ಅಂತ್ಯತ ಸುರಕ್ಷಿತ ಮಾಸ್ಕ ಇದಾಗಿದೆ.

ಈಗಾಗಲೇ ಸುಮಾರು 2 ಲಕ್ಷಕ್ಕೂ ಹೆಚ್ಚು ಖಾದಿ ಮಾಸ್ಕಗಳನ್ನ ತಾಯಾರಿಸಿ, ರಾಜ್ಯದ ವಿವಿಧ ಇಲಾಖೆಗಳಿಗೆ ಹಾಗೂ ಐಟಿ ಕಂಪನಿಗಳಿಗೆ,  ಪಕ್ಕದ ಮಹಾರಾಷ್ಟ್ರದ ಪುಣೆ, ಸೊಲ್ಲಾಪುರ ಅಲ್ಲದೇ ತಮಿಳುನಾಡಿನ ಚೆನೈ ಮತ್ತಿತರ ಕಡೆ ಖಾದಿ ಮಾಸ್ಕ್ ಪೂರೈಸಿರುವ ಈ ಸಂಸ್ಥೆ ಈಗ ಮತ್ತೋಮ್ಮೆ ಎರಡನೇಯ ಅಲೆಯಿಂದಾಗಿ ಹೆಚ್ಚಿದ ಬೇಡಿಕೆಗಾಗಿ ಪೂರೈಸಲು ಮಾಸ್ಕ್ ನಿರ್ಮಾಣದಲ್ಲಿ ತೊಡಗಿದೆ.

ರಾಘವೇಂದ್ರ ಮುತಾಲಿಕ್ ದೇಸಾಯಿ ಅವರ ನೇತೃತ್ವದ ಈ ಸೊಸಾಯಿಟಿ ಅತ್ಯಂತ ಕಡಿಮೆ ಲಾಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವಂತ ವಿವಿಧ ಮಾಸ್ಕಗಳಿಗಿಂತ ಉನ್ನತ ಗುಣಮಟ್ಟದ ಮಾಸ್ಕಗಳನ್ನ ಕಡಿಮೆ ಲಾಭದಲ್ಲಿ ತಯಾರಿಸಿ ಮಾರುತ್ತಿದೆ.

ರಾಘವೇಂದ್ರ ಮುತಾಲಿಕ್ ದೇಸಾಯಿ ಹಾಗೂ ಅವರ ಕುಟುಂಬದ ಸದಸ್ಯರು ಈ ಕಾರ್ಯದಲ್ಲಿ ತೊಡಗಿದ್ದಷ್ಟೇ ಅಲ್ಲದೇ, ಖಾದಿ ಅವಲಂಬಿತ ಸುಮಾರು 8 ಕುಟುಂಬಗಳು ಇವರೊಂದಿಗೆ ಕೈ ಜೋಡಿಸಿವೆ. ಮೂರು ವಿನ್ಯಾಸದಲ್ಲಿ ಖಾದಿ ಮಾಸ್ಕಗಳು ತಯಾರಿಗೊಳ್ಳುತ್ತಿದ್ದು, ಇಂತಹ ಪ್ರಯತ್ನಕ್ಕೆ ಸರಕಾರಗಳು ಬೆಂಬಲ ನೀಡಿ ಪ್ರೋತ್ಸಾಹಿಸಿದ್ದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಜೊತೆ ಜೊತೆಯಲ್ಲೇ ಖಾದಿ ಅವಲಂಬಿತರಿಗೆ ಉದ್ಯೋಗವೂ ಕಲ್ಪಿಸಿಕೊಡಬಹುದಾಗಿದೆ ಎಂದು ಹೇಳುತ್ತಾರೆ ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply