ಹಾಲು ಉತ್ಪಾದಕರ ಸಹಕಾರ ಸಂಘದ ಮರು ವಿಚಾರಣೆ: ಭೀಮಾನಾಯ್ಕ ಸದಸ್ಯತ್ವ ರದ್ದು
ಹೊಸಪೇಟೆ: ಹಾಲು ಉತ್ಪಾದಕರ ಸಹಕಾರ ಸಂಘದ ಮರುವಿಚಾರಣೆಯಲ್ಲಿ ಭೀಮಾನಾಯ್ಕ ಸದಸ್ಯತ್ವ ರದ್ದು ಗೊಂಡಿದ್ದು, ಹಿಂದಿನ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಮರು ವಿಚಾರಣೆ ನಡೆಸಿದ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ನ್ಯಾಯಾಲ
ಯದ ನ್ಯಾಯಾಧೀಶ ಲಿಯಾಕತ್‌ ಅಲಿ ಅವರು ಭೀಮಾನಾಯ್ಕ ಸದಸ್ಯ ರದ್ದತಿಯ ಆದೇಶ ಹೊರಡಿಸಿದ್ದಾರೆ.
ಭೀಮಾ ನಾಯ್ಕ ಅವರ ಆಯ್ಕೆ ಪ್ರಶ್ನಿಸಿ ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಕೆ. ಬಸವರಾಜ, ಆರ್‌. ನಾಗನಗೌಡ ಅವರು ಆಗಸ್ಟ್‌ 17ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ, ಭೀಮಾ ನಾಯ್ಕ ಅವರು ಅಡವಿ ಆನಂದ ದೇವನ ಹಳ್ಳಿಯ ಖಾಯಂ ನಿವಾಸಿಯಲ್ಲ.

ಅವರು ಹಾಲು ಉತ್ಪಾದಕರ ಸಂಘದ ಸದಸ್ಯರಾಗಿ ಮುಂದುವರಿಯಲು ಅರ್ಹರಲ್ಲ. ಹಾಗಾಗಿ ಅವರ ಸದಸ್ಯತ್ವ ರದ್ದಾಗಲಿದೆ ಎಂದು ನ್ಯಾಯಾಧೀಶರು ಅಕ್ಟೋಬರ್‌ 6 ರಂದು ಆದೇಶ ಹೊರಡಿಸಿದ್ದರು.‌
ಈ ತೀರ್ಪು ಪ್ರಶ್ನಿಸಿ ಭೀಮಾನಾಯ್ಕ ಅವರು ಧಾರವಾಡ ಹೈಕೋರ್ಟ್‌ ಪೀಠದ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯವು ತೀರ್ಪಿಗೆ ತಡೆಯಾಜ್ಞೆ ನೀಡಿ, ಮರು ವಿಚಾರಣೆ ನಡೆಸುವಂತೆ ಸೂಚಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ ಮರು ವಿಚಾರಣೆ ನಡೆಸಿದ ಹೊಸಪೇಟೆಯ ಸಹಕಾರ ಸಂಘಗಳ ನ್ಯಾಯಾಲಯವು ಅವರ ಸದಸ್ಯತ್ವ ರದ್ದುಪಡಿಸಿ ಆದೇಶ ಹೊರಡಿಸಿದೆ.

ಈ ತೀರ್ಪಿನಿಂದ ಭೀಮಾ ನಾಯ್ಕ ಅವರ ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ ಹಾಗೂ ರಾಯಚೂರು ಬಳ್ಳಾರಿ ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವವನ್ನು ಕಳೆದು ಕೊಳ್ಳಲಿದ್ದಾರೆ.

Leave A Reply