ಬಳ್ಳಾರಿ – ಬಳ್ಳಾರಿ ನಗರದ ಸತ್ಯನಾರಾಯಣ ಪೇಟೆಯ ರಾಘವೇಂದ್ರ ದೇವಾಲಯದ ಬಳಿಯ ಹಾಗೂ ಗಣೇಶ ಕಾಲೋನಿಯಲ್ಲಿರುವ ಉದ್ಯಾನವನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಒಂದು ಕಾಮಗಾರಿಗೆ ಅಂದಾಜು ಮೊತ್ತ 16.54 ಲಕ್ಷ ರೂಪಾಯಿಯಂತೆ ಎರಡು ಕಾಮಗಾರಿಗಳಿಗೆ ಒಟ್ಟು 33.08 ಲಕ್ಷ ರೂಪಾಯಿ ವೆಚ್ಚದ ನೂತನ ಓಪನ್ ಜಿಮ್ ಸಲಕರಣೆಗಳನ್ನು ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ಹಾಗೂ ಬುಡಾ ಅಧ್ಯಕ್ಷರಾದ ದಮ್ಮೂರು ಶೇಖರ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಅಶೋಕ್, ಶ್ರವಣಕುಮಾರ್ ರೆಡ್ಡಿ, ಪಾಲಣ್ಣ, ಮಂಜುನಾಥ ಹಾಗೂ ಗುತ್ತಿಗೆದಾರರಾದ ಮಧು ಮತ್ತು ಇತರ ಮುಖಂಡರುಗಳು ಉಪಸ್ಥಿತರಿದ್ದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply