ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಾಕ್ ಪರೀಕ್ಷೆ.

0

ರಾಯಚೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನ ವಿದ್ಯಾರ್ಥಿಗಳು ಧೈರ್ಯದಿಂದ ಎದುರಿಸಲು, ಹೊಸ ಮಾದರಿನಲ್ಲಿ ನಡೆಸುವ ಪರೀಕ್ಷೆಯನ್ನ ಪದ್ದತಿಯ ಕುರಿತು ತಿಳುವಳಿಕೆ ನೀಡುವ ಉದ್ದೇಶದಿಂದ ರಾಯಚೂರಿನಲ್ಲಿ ಮಾಕ್ ಪರೀಕ್ಷೆಯನ್ನ ನಡೆಸಲಾಯಿತು. ಕೊರೊನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬೇಕು ಅಥವಾ ಬೇಡ ಎಂಬ ಪರ-ವಿರೋಧ ನಡುವೆ ಮಧ್ಯೆಯೇ ಶಿಕ್ಷಣ ಇಲಾಖೆ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಿದೆ.

2021 ಜುಲೈ 19 ಮತ್ತು 22 ರಂದು ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ನೂತನ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಕ್ ( ಮಾದರಿ ಪರೀಕ್ಷೆ) ಎಕ್ಸಾಂ ನಡೆಸಿ, ಪರೀಕ್ಷೆ ಬಗ್ಗೆ ಭಯ ದೂರಗೊಳಿಸಲಾಗುತ್ತಿದೆ. ಈಗಾಗಲೇ ವಿದ್ಯಾರ್ಥಿಗಳ ಮನೆಗಳಿಗೆ ನೂತನ ಮಾದರಿಯ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಜತೆಯಲ್ಲಿ ಮಕ್ಕಳಲ್ಲಿ ಮತ್ತೊಷ್ಟು ಆತ್ಮವಿಶ್ವಾಸ ಹೆಚ್ಚಿಸುವ ದೃಷ್ಠಿಯಿಂದ ವಾರ್ಷಿಕ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರದ ಸ್ಥಳದಲ್ಲೇ ಕೂಡಿಸಿ ಮಾಕ್ ಎಕ್ಸಾಂ ನಡೆಸಲಾಯಿತು.

ಇನ್ನೂ ಮೂರು ಬಣ್ಣದಲ್ಲಿ ಇರಲಿವೆ ಉತ್ತರ ಪತ್ರಿಕೆ ಪಿಂಕ್, ಆರೇಜ್, ಗ್ರೀನ್ ಬಣ್ಣದಲ್ಲಿ ಇರಲಿದ್ದು, 120 ಅಂಕಗಳಿಗೆ 3 ಗಂಟೆಗಳ ಕಾಲ ಸಮಯ ನಿಗದಿ ಮಾಡಲಾಗಿದೆ. ಒಂದು ವಿಷಯಕ್ಕೆ 40 ಅಂಕಗಳು ನಿಗದಿಯಾಗಿದ್ದು, ಜುಲೈ 19ರಂದು ಮೊದಲ ದಿನದ ಪರೀಕ್ಷೆ ನಡೆಯಲಿದೆ. ಪಿಂಕ್ ಬಣ್ಣದಲ್ಲಿ ಇರಲಿದೆ ಗಣಿತ ವಿಷಯ, ಆರೇಜ್ ಬಣ್ಣದಲ್ಲಿ ಇರಲಿದೆ ವಿಜ್ಞಾನ ವಿಷಯ, ಗ್ರೀನ್ ಕಲರ್ನಲ್ಲಿ ಇರಲಿದೆ ಸಮಾಜವಿಜ್ಞಾನ ವಿವಾಗಿದೆ.

ಜುಲೈ 22ರಂದು ಎರಡನೇ ದಿನದ ಪರೀಕ್ಷೆ ಪಿಂಕ್ ಬಣ್ಣದಲ್ಲಿ ಇರಲಿದೆ ಕನ್ನಡ, ಆರೇಜ್ ಬಣ್ಣದಲ್ಲಿ ಇರಲಿದೆ ಇಂಗ್ಲಿಷ್, ಗ್ರೀನ್ ಕಲರ್ ನಲ್ಲಿ ನಡೆಯಲಿದೆ. ಇನ್ನೂ ಜಿಲ್ಲೆಯಲ್ಲಿ ಒಟ್ಟು 179 ಪರೀಕ್ಷೆಗಳನ್ನ ಸ್ಥಾಪಿಸಲಾಗಿದ್ದು, 30472 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಎಕ್ಸಾಂ ನೋಂದಣಿ ಮಾಡಿಕೊಂಡಿದ್ದಾರೆ. ಕೋವಿಡ್-19 ನಿಯಮಗಳೊಂದಿಗೆ ಎಕ್ಸಾಂ ನಡೆಸಲು ಶಿಕ್ಷಣ ಇಲಾಖೆಯು ಸಕಲ ರೀತಿಯಲ್ಲಿ ಪೂರ್ವ ತಯಾರಿ ಮಾಡಿಕೊಂಡಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply